ತಾಳಿಕೋಟೆಯಲ್ಲಿ ವಿಶ್ವಕರ್ಮ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಯಾದಗಿರಿಯ ವಿಶ್ವಕರ್ಮ ಏಕದಂಡಗಿಮಠದ ಶ್ರೀರವೀಂದ್ರ ಸಾಮೀಜಿ ಪಾಲ್ಗೊಂಡು ಮಾತನಾಡಿದರು.  
ನ್ಯೂಸ್

ಬ್ರಹ್ಮಾಂಡದ ಪ್ರಧಾನ ವಾಸ್ತು ಶಿಲ್ಪಿ ವಿಶ್ವಕರ್ಮ

ತಾಳಿಕೋಟೆ: ಬ್ರಹ್ಮಾಂಡದ ಪ್ರಧಾನ ವಾಸ್ತು ಶಿಲ್ಪಿ ವಿಶ್ವಕರ್ಮ ಎಂದು ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ರವೀಂದ್ರ ಸ್ವಾಮೀಜಿ ನುಡಿದರು.

ವಿಶ್ವಕರ್ಮ ಸಮಾಜದ ಅಧ್ಯ ಶ್ರೀನಿವಾಸ ಸೋನಾರ ಶುಕ್ರವಾರ ಆಯೋಜಿಸಿದ್ದ ವಿಶ್ವಕರ್ಮ ಹೋಮ, ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪುಣ್ಯ ಕಾರ್ಯ ಮಾಡುತ್ತ ಸಮಾಜದ ಏಳಿಗೆ ಬಯಸಬೇಕು.ವಿಶ್ವಕರ್ಮ ಸಮಾಜ ಪಂಚ ಕಸಬುಗಳಿಂದ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮಂಗಳೂರಿನ ವಿಜಯಶರ್ಮಾ, ಪ್ರಶಾಂತ, ಪಿಯುಶ್​ ಅವರು ಹೋಮ, ಪೂಜೆ ನೆರವೇರಿಸಿದರು. ಪ್ರಭಾಕರ ಹಿಪ್ಪರಗಿ, ಮುತ್ತು ಸೋಮನಾಳ, ಪುರಸಭೆ ಸದಸ್ಯ ಮುದಕಣ್ಣ ಬಡಿಗೇರ, ಗಂಗಾಧರ ಬಡಿಗೇರ, ಸುನೀಲ ವರದಪ್ಪನವರ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಮದರಕಲ್ಲ, ಬಿ.ಎನ್​.ಹಿಪ್ಪರಗಿ, ಬಾಬುರಾವ್​ ಶಿಂಧೆ, ಪಾಲ್ಗೊಂಡಿದ್ದರು.