ಮಹಾರಾಷ್ಟ್ರ: ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ಒಂದಲ್ಲಾವೊಂದು ವಿಚಾರವಾಗಿ ಸೋಶಿಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ದುಬಾರಿ ಬೆಲೆಯ ಮನೆಯನ್ನು ಕೊಹ್ಲಿ ಖರೀದಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡಾ ಕೊಹ್ಲಿ, ಅಲಿಬಾಗ್ನಲ್ಲಿ ಮನೆ ಖರೀದಿಸಿದ್ದರು. ಆದರೆ ಈಗ ಖರೀದಿ ಮಾಡಿರುವ ವಿಲ್ಲಾದ ಬೆಲೆ ಕೇಳಿದರೆ ಖಂಡಿತವಾಗಿಯೂ ನೀವು ಆಶ್ಚರ್ಯ ಪಡುವುದು ಹೌದು.
ಅವಾಸ್ ಲಿವಿಂಗ್‌ನಲ್ಲಿ ಕೊಹ್ಲಿ ಹೊಸ ವಿಲ್ಲಾ ಖರೀದಿಸಿದ್ದು, ಇದರ ಬೆಲೆ ಸುಮಾರು 6 ಕೋಟಿ ಯಾಗಿದ್ದು, ಈ ವಿಲ್ಲಾ 2000 ಚದರ ಅಡಿ ವಿಸ್ತೀರ್ಣ ಹೊಂದಿದೆ.ಹೊಸ ವಿಲ್ಲಾದ ನೋಂದಣಿ ಶುಲ್ಕಕ್ಕಾಗಿ ಕೊಹ್ಲಿ 36 ಲಕ್ಷ ರೂ. ಪಾವತಿಸಿದ್ದು, ಈ ಹೊಸ ವಿಲ್ಲಾದಲ್ಲಿ ಸರಿಸುಮಾರು 400 ಚದರ ಅಡಿ ಅಳತೆಯ ದೊಡ್ಡ ಈಜುಕೊಳವಿದೆ.
ಕೊಹ್ಲಿಯ ವಿಲ್ಲಾದ ಬಗ್ಗೆ ಮಾಹಿತಿ ನೀಡಿರುವ ಅವಾಸ್ ಲಿವಿಂಗ್ನ ಕಾನೂನು ಸಲಹೆಗಾರ ಅಡ್ವೊಕೇಟ್ ಮಹೇಶ್ ಮ್ಹಾತ್ರೆ, ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ ನೋಂದಣಿಯಂತಹ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿಯೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫಾರ್ಮ್ ಹೌಸ್ ಖರೀದಿಸಿದ್ದರು. ಖರೀದಿಗಾಗಿ ಕೊಹ್ಲಿ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿದ್ದರು. 36 ಸಾವಿರದ 59 ಚದರ ಅಡಿ ವಿಸ್ತೀರ್ಣದ ಈ ಫಾರ್ಮ್ ಹೌಸ್ ಖರೀದಿಗಾಗಿ ಕೊಹ್ಲಿ, 1.15 ಕೋಟಿ ರೂಪಾಯಿಯನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಿದ್ದರು.