ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳ ನಡುವೆ, ಕ್ರಿಕೆಟಿಗ ವಿರಾಟ್ ಕಹಲ್ಇ ತಮ್ಮ ಪತ್ನಿ ತಾಯ್ತನವನ್ನು ಹೇಗೆ ನಿಭಾಯಿಸಿದರು ಎನ್ನುವ ಬಗ್ಗೆ ಮಾತನಾಡಿದ್ದಾರೆ.
ವಿರಾಟ್-ಅನುಷ್ಕಾಗೆ ಜನವರಿ 2021ರಲ್ಲಿ ತಮ್ಮ ಮೊದಲ ಮಗುವಿನ ಜನನವಾಯ್ತು. ಸಂದರ್ಶನವೊಂದರಲ್ಲಿ, ವಿರಾಟ್ ಅನುಷ್ಕಾ ಪ್ರೆಗ್ನೆನ್ಸಿ ಮತ್ತು ತಮ್ಮ ಕೆಲಸ ಎರಡನ್ನೋ ಒಟ್ಟಿಗೇ ನಿಭಾಯಿಸಿದ ಕುರಿತಂತೆ ಮಾತನಾಡಿದ್ದಾರೆ. ಜತೆಗೆ ಅನುಷ್ಕಾ ವಾಮಿಕಾ ಜನನದ ಬಳಿಕ ಒಂದು ಶಾರ್ಟ್ ಫಿಲ್ಮ್ನಲ್ಲಿಯೂ ನಟಿಸಿದ್ದಾರೆ.
ವಿರಾಟ್ ಅನುಷ್ಕಾ ಅವರನ್ನು ಹೊಗಳಿದರು.ಹಾಗೆಯೇ ಅನುಷ್ಕಾ-ವಿರಾಟ್ ತಮ್ಮ ಎರಡನೇ ಮಗುವಿನ ರೂಮರ್ಸ್‌ಗೆ ಫುಲ್‌ಸ್ಟಾಪ್ ಹಾಕಿದ್ದಾರೆ.
ಹಾಗೆ ಇದು ಕಾಕತಾಳೀಯವಲ್ಲ. ಊಹಾಪೋಹಗಳನ್ನು ತಪ್ಪಿಸಲು ಅನುಷ್ಕ ಅವರು ಸಾರ್ವಜನಿಕರ ಕಣ್ಣುಗಳಿಂದ ದೂರ ಉಳಿದಿದ್ದಾರೆ ಎಂದು ಸ್ಪಷ್ಟನೇ ನೀಡಿದ್ದಾರೆ ಪತಿ ವಿರಾಟ್. ಇದೇ ಸಂದರ್ಭದಲ್ಲಿ ಮತ್ತಷ್ಟು ವಿಚಾರಗಳನ್ನ ಹಂಚಿಕೊಂಡ ವಿರಾಟ್, ನಾನು ಅನುಷ್ಕಾಳಿಂದ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಕಲಿತಿದ್ದೇನೆ.
ವಿರಾಟ್ "ಕೆಲವು ಕಡೆ ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ಕೊನೆಯ ಹಂತದಲ್ಲಿ ಸುದ್ದಿಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಾರೆ.
ಈ ಕಾರಣದಿಂದ ಅನುಷ್ಕಾ ಇತ್ತೀಚೆಗೆ ಸಾರ್ವಜನಿಕ ಕಾಣಿಸಿಕೊಳುತ್ತಿರುವುದಿಲ್ಲ ಎಂದು ಸುದಿ ಹಬ್ಬಿದ್ದವು" ಆದ್ದರಿಂದ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಯಾರೂ ನಮ್ಮನ್ನು ನಂಬಲು ಅಥವಾ ನಾವು ಹೇಳುವುದನ್ನು ಕೇಳಲು ಸಿದ್ದರಿಲ್ಲದಾಗ ಸತ್ಯದ ಪರವಾಗಿ ನಿಲ್ಲುವುದು ಹೇಗೆ ಎಂದು ನಾನು ಅನುಷ್ಕಾಳಿಂದ ಕಲಿತಿದ್ದೇನೆ. - ಅವಳು ಯಾವಾಗಲೂ ನನಗೆ ಹೇಳುತ್ತಿದ್ದಳು, ನೀವು ಸತ್ಯದ ಪರವಾಗಿ ನಿಂತಿದ್ದರೆ ನೀವು ಯಾವುದರ ಬಗ್ಗೆಯೂ ತೆಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ವಿರಾಟ್ ಹೇಳಿದ್ದಾರೆ.