ನ್ಯೂಸ್

ಪುತ್ರ ಅಕೇಯಾ ಜತೆ ಲಂಡನ್​ನಲ್ಲಿ ಸುತ್ತಾಡುತ್ತಿರುವ ವಿರಾಟ್ ಕೊಹ್ಲಿ, ಅನುಷ್ಕಾ! ಫೋಟೋ ವೈರಲ್​ | ViratKohli family vibes

ViratKohli family vibes: ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ನಿರಂತರ ಜನಮನದಿಂದ ದೂರವಾಗಿ ಶಾಂತ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಈ ದಂಪತಿಗಳು ತಮ್ಮ ಪುಟ್ಟ ಮಗು ಅಕೇಯನ್ನು ತಮ್ಮ ಸ್ಟ್ರಾಲರ್‌ನಲ್ಲಿ ಸುತ್ತಾಡಲು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ದಂಪತಿಗಳ ಫೋಟೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಮುದ್ದಾದ ಕುಟುಂಬದ ಬಗ್ಗೆ ಹಲವಾರು ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿರಾಟ್​ರವರ ಅಭಿಮಾನಿಗಳ ಗುಂಪು ಹಂಚಿಕೊಂಡ ಫೋಸ್ಟ್​ನಲ್ಲಿ ಅನುಷ್ಕಾ ಶರ್ಮಾ ಇಬ್ಬರು ದಾರಿಹೋಕರೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸುತ್ತಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಕೂಡ ಈ ತಮಾಷೆಯಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಅನುಷ್ಕಾ ಕಪ್ಪು ಪ್ಯಾಂಟ್ ಹೊಂದಿರುವ ಬಿಳಿ ಶರ್ಟ್ ಧರಿಸಿ ಜೊತೆಗೆ ದೊಡ್ಡ ಹ್ಯಾಂಡ್‌ಬ್ಯಾಗ್ ಹಿಡಿದುಕೊಂಡಿದ್ದಾರೆ. ಇನ್ನು ವಿರಾಟ್ ಗುಲಾಬಿ ಬಣ್ಣದ ಸ್ವೆಟ್‌ಶರ್ಟ್ ಮತ್ತು ಕಪ್ಪು ಶಾರ್ಟ್ಸ್‌ನಲ್ಲಿ ಓಡಾಡುತ್ತಿದ್ದಾರೆ.

ತಮ್ಮ ಎರಡನೇ ಮಗು ಅಕಾಯ್ ಜನಿಸಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ದಂಪತಿ ಲಂಡನ್‌ಗೆ ಸ್ಥಳಾಂತರಗೊಂಡರು. 2018 ರಲ್ಲಿ ವಿವಾಹವಾದ ಈ ಜೋಡಿ, 2021 ಮಗಳು ವಾಮಿಕಳ ಸ್ವಾಗತದಿಂದ ಪೋಷಕ ಪಾತ್ರವನ್ನು ಸ್ವೀಕರಿಸಿದ್ದಾರೆ.

ಇನ್ನೊಂದು ಸುದ್ದಿಯೆಂದರೆ, ವಿರಾಟ್ ಕೊಹ್ಲಿ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಇದರಿಂದಾಗಿ ಅನೇಕ ಅಭಮಾನಿಗಳು ನೀರಸ ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಅವರು ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದರು. ಒಂದು ತಿಂಗಳ ನಂತರ, ಜೂನ್‌ನಲ್ಲಿ, ಕ್ರಿಕೆಟಿಗ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬಹುನಿರೀಕ್ಷಿತ ಐಪಿಎಲ್ ಟ್ರೋಫಿಯನ್ನು ಗೆದ್ದು ದಾಖಲೆ ಸೃಷ್ಟಿಸಿದರು.

ನೆಟ್ಟಿಗರ ಪ್ರತಿಕ್ರಿಯೆ

ಬಹಳ ದಿನಗಳ ನಂತರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಒಟ್ಟಿಗೆ ನೋಡುವುದು ಹೃದಯಸ್ಪರ್ಶಿಯಾಗಿತ್ತು" ಎಂದು ಒಬ್ಬ ಇನ್​ಸ್ಟಾಗ್ರಾಮ್​ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಲಂಡನ್‌ನಲ್ಲಿ ಪವರ್ ಜೋಡಿ ಒಟ್ಟಿಗೆ ಇರುವುದು ರಾಜ ಮತ್ತು ರಾಣಿ ತರ ಕಂಗೊಳಿಸುತ್ತಿದ್ದಾರೆ ಎಂದು ಬರೆದಿದ್ದಾರೆ.

2018 ರಲ್ಲಿ ಬಿಡುಗಡೆಯಾದ 'ಝೀರೋ' ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ನಟಿಸಿದ್ದ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿಯ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಪ್ರತಿಕ್ರಿಯಿಸಿದ್ದು, ಇದು ಕ್ರಿಕೆಟಿಗರ ರಹಸ್ಯ "ಯುದ್ಧಗಳನ್ನು" ಎತ್ತಿ ತೋರಿಸುವ ಒಂದು ಸುಂದರ ಟಿಪ್ಪಣಿ ಎಂದು ಬರೆದಿದ್ದರು. (ಏಜೆನ್ಸೀಸ್)