ನ್ಯೂಸ್

ವೀರಶೈವಾಗಮ

ನಿರುಪಾದಿ ಬ್ಯಾಡಗಿ
ಆಜ್ಞೋಪಮಾ ಚ ಕಲಶಾಭಿಷೇಕಾಖ್ಯಾ ತತಃ ಪರಂ | ಸ್ವಸ್ತಿಕಾರೋಹಣಂ ಭೂತಿಪಟ್ಟಮಾಯತ್ತಮೇವ ಚ |

ಸ್ವಾಯತ್ತಮಿತಿ ಸಪೆôತಾಃ ಕ್ರಿಯಾದೀಕ್ಷಾಂತರಾ ಮತಾಃ ||

ದೀಕ್ಷೆಯು ಒಂದು ಪವಿತ್ರವಾದ ಸಂಸ್ಕಾರ. ಅಷ್ಟೇ ಸೂಕ್ಷ್ಮವಾದ ಮತ್ತು ಭಾವನಾತ್ಮಕವಾದ ಸಂಸ್ಕಾರ. ಇದರಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬುದಾಗಿ ಪ್ರಮುಖವಾಗಿ ಮೂರು ಭೇದಗಳು. ಇವುಗಳಲ್ಲಿ ಒಂದೊಂದು ದೀಕ್ಷೆಯಲ್ಲಿ ಏಳೇಳು ವಿಧವಾದ ಸಂಸ್ಕಾರಗಳನ್ನು ನೀಡಲಾಗುತ್ತದೆ. ಇವುಗಳನ್ನೂ ಉಪದೀಕ್ಷೆಗಳೆಂದು ಕರೆಯಲಾಗುತ್ತದೆ. ಆಜ್ಞಾ, ಉಪಮಾ, ಕಲಶಾಭಿಷೇಕ, ಸ್ವಸ್ತಿಕಾರೋಹಣ, ಭೂತಿಪಟ್ಟ, ಆಯತ್ತ ಮತ್ತು ಸ್ಬಾಯತ್ತ ಇವು ಕ್ರಿಯಾದೀಕ್ಷಾಂತರ್ಗತವಾದ ಏಳು ಉಪದೀಕ್ಷೆಗಳು.

| ಕಾರಣಾಗಮ (ಕ್ರಿ. ಪಾ. 1.43) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.