ನ್ಯೂಸ್

ಲೈವ್‌ಸ್ಟ್ರೀಮ್ ವೇಳೆ ಕೋಟಿ ಮೌಲ್ಯದ ಕಾರು ಕ್ರ್ಯಾಶ್​​: ಗಾಯಗೊಂಡರು ವಿಡಿಯೋ ಮಾಡಲು ಮುಂದಾದ ಯೂಟ್ಯೂಬರ್..​ | Viral Video

ಯೂಟ್ಯೂಬರ್ ಮತ್ತು ಕಿಕ್‌ಸ್ಟ್ರೀಮರ್ ಜ್ಯಾಕ್ ಡೊಹೆರ್ಟಿ ಹೈ-ಪ್ರೊಫೈಲ್​​ ಸಾಹಸಗಳನ್ನು ವಿಡಿಯೋ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಸದ್ಯ ಮಳೆಯ ನಡುವೆ ಲೈವ್​ಸ್ಟೀಮಿಂಗ್​ ಮಾಡುವ ಸಮಯದಲ್ಲಿ ಮಿಯಾಮಿಯಲ್ಲಿ ಅವರ ಐಷಾರಾಮಿ $200,000 ಮೆಕ್‌ಲಾರೆನ್ 570S ಅನ್ನು ಕ್ರ್ಯಾಶ್ ಮಾಡಿ ವಿವಾದದಲ್ಲಿ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 15 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​​ಗಳನ್ನು ಹೊಂದಿರುವ 20 ವರ್ಷದ ಜ್ಯಾಕ್ ಡೊಹೆರ್ಟಿ ಅಪಘಾತ ಸಂಭವಿಸಿದಾಗ ಕಿಕ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡುತ್ತಿದ್ದರು.(Viral Video)

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್ ಅವರು ಡ್ರೈವಿಂಗ್ ಮಾಡುತ್ತಿರುವಾಗ ಅವರ ಫೋನ್‌ನಲ್ಲಿ ಸಂದೇಶ ಕಳುಹಿಸುವುದನ್ನು ನೋಡಬಹದುಉ. ಆದರೆ ವಿಡಿಯೋವನ್ನು ಅವನ ಕ್ಯಾಮೆರಾಮೆನ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾನೆ ಎಂದು ಸೂಚಿಸುತ್ತದೆ. ಡ್ರೈವಿಂಗ್​ ಮಾಡುತ್ತಲೆ ಅವನಿಂದ ಫೋನ್​ ಪಡೆದು ನೋಡುತ್ತಾನೆ. ಆ ಸಮಯದಲ್ಲಿ ಕಾರಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ ಮತ್ತು ಗಾರ್ಡ್ರೈಲ್ಗೆ ಡಿಕ್ಕಿ ಹೊಡೆಯುತ್ತಾನೆ. ಆ ವೇಳೆ ನೋ..ನೋ.. ಎಂದು ಚಿರುವುದನ್ನು ನಾವು ನೋಡಬಹುದು.

ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರು ತಕ್ಷಣ ಜ್ಯಾಕ್ ಡೊಹೆರ್ಟಿ ಮತ್ತು ಅವನ ಕ್ಯಾಮೆರಾಮೆನ್ ವಾಹನದಿಂದ ಹೊರತೆಗೆಯಲು ಧಾವಿಸುತ್ತಾರೆ. ಕಾರಿನಿಂದ ಇಬ್ಬರನ್ನು ಹೊರತೆಗೆಯುತ್ತಾರೆ.

ಆ ಸಮಯದಲ್ಲೂ ಆಸ್ಪತ್ರೆಗೆ ಧಾವಿಸುವ ಬದಲು ಅಪಘಾತದ ನಂತರ ಲೈವ್‌ಸ್ಟ್ರೀಮ್ ಅನ್ನು ರೆಕಾರ್ಡ್ ಮಾಡಲು ಜ್ಯಾಕ್ ತನ್ನ ಗಾಯಗೊಂಡ ಕ್ಯಾಮೆರಾಮೆನ್​​​ ಕೇಳುತ್ತಾನೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಇಬ್ಬರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತನ ಸ್ನೇಹಿತನಿಗೆ ಗಾಯಗಳಿಗೆ ಸ್ಟಿಚ್​​ ಹಾಕಲಾಗಿದೆ. ಅದೃಷ್ಟವಶಾತ್ ಜೀವಕ್ಕೆ ಅಪಾಯವಾಗಿಲ್ಲ.

ಕ್ಯಾಮೆರಾದಲ್ಲಿ ಲೈವ್ ಆಗಿ ಸೆರೆಹಿಡಿಯಲಾದ ಅಪಘಾತವು ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ವಿಮರ್ಶಕರ ನಡುವೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಜ್ಯಾಕ್ ಡೊಹೆರ್ಟಿ ಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಕಿಕ್ ಜ್ಯಾಕ್ ಡೊಹೆರ್ಟಿ ವಿರುದ್ಧ ತ್ವರಿತ ಕ್ರಮಕೈಗೊಂಡಿತು. ಸೈಟ್‌ನಿಂದ ಅವರನ್ನು ನಿಷೇಧಿಸಿತು ಮತ್ತು ಅವರ ಖಾತೆಯನ್ನು ತೆಗೆದುಹಾಕಿತು. ಕಿಕ್‌ನ ಮಾರ್ಗಸೂಚಿಗಳು ಅಪಾಯಕಾರಿ [ನಡವಳಿಕೆ] ತಪ್ಪಿಸುವ ಮೂಲಕ ಬಳಕೆದಾರರ ಸುರಕ್ಷತೆ ಮತ್ತು ಅವರ ಸುತ್ತಮುತ್ತಲಿನವರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಕಾನೂನುಬಾಹಿರ ಚಟುವಟಿಕೆಯನ್ನು ಕ್ಷಮಿಸುವುದಿಲ್ಲ. ಅದಕ್ಕಾಗಿಯೇ ನಾವು ತ್ವರಿತವಾಗಿ ಕ್ರಮಕೈಗೊಂಡಿದ್ದೇವೆ. ವೇದಿಕೆಯಿಂದ ಇವರನ್ನು ನಿಷೇಧಿಸಲು ಮುಂದಾಗಿದ್ದೇವೆ ಎಂದು ಕಿಕ್ ಹೇಳಿದೆ.(ಏಜೆನ್ಸೀಸ್​​)