ಕಂಟೆಂಟ್ ಕ್ರಿಯೇಟರ್ ಪ್ರಪಂಚವೂ ಬಹಳ ದೊಡ್ಡದಾಗಿದೆ. ಪ್ರತಿದಿನ ನಾವು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಹೊಸ ವಿಷಯಗಳನ್ನು ನೋಡುತ್ತೇವೆ. ಅನೇಕರು ಕಂಟೆಂಟ್ ಕ್ರಿಯೇಟ್ ಮಾಡುವುದನ್ನೇ ತಮ್ಮ ವೃತ್ತಿ ಆಯ್ಕೆಯಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಆದರೆ ಪ್ರತಿಯೊಂದಕ್ಕೂ ಕೆಲವು ಅನುಕೂಲಗಳಿವೆ ಮತ್ತು ಕೆಲವು ಅನಾನುಕೂಲತೆಗಳಿವೆ ಎಂಬುದು ಸಹ ನಿಜ. ಈಗ ಕಂಟೆಂಟ್ ಕ್ರಿಯೇಟರ್ ಜತೆಗೆ ಜತೆಗೆ ಟ್ರೋಲಿಂಗ್ ಕೂಡ ತುಂಬಾ ಕಾಮನ್ ಆಗಿಬಿಟ್ಟಿದೆ.(Viral Video)
ಇದನ್ನು ಓದಿ: ಬಸ್ ಟೈರ್ಗೆ ಗಾಳಿ ತುಂಬುವಾಗ ಸಂಭವಿಸಿದ ಸ್ಫೋಟ; ಹುಡುಗನ ಸ್ಥಿತಿ ನೋಡಿದ್ರೆ ಗೂಸ್ಬಂಪ್ಸ್ ಬರೋದು ಗ್ಯಾರಂಟಿ | Viral Video
ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲೆಂದೆ ಕೆಲವರು ಇರುತ್ತಾರೆ. ಅವರು ಯಾವುದನ್ನು ಬಿಡುವುದಿಲ್ಲ. ಅವಕಾಶ ಸಿಕ್ಕಾಗೆಲ್ಲಾ ತಕ್ಷಣ ಟ್ರೋಲ್ ಮಾಡಲು ಶುರು ಮಾಡುತ್ತಾರೆ. ಹೀಗೆ ಕಂಟೆಂಟ್ ಕ್ರಿಯೇಟರ್ ಒಬ್ಬರ ಬಾಡಿ ಶೇಮಿಂಗ್ ಮಾಡಿದ್ದಾರೆ. ಅಕೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಟ್ರೋಲರ್‌ಗಳಿಗೆ ಉತ್ತಮ ವಿಧಾನದಲ್ಲಿ ಉತ್ತರಿಸಿದ್ದಾರೆ. ಹಾಡು ಹೇಳುವ ಮೂಲಕ ಅವರು ಟ್ರೋಲರ್‌ಗಳಿಗೆ ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಜನಪ್ರಿಯವಾಗಿದೆ.
ಟ್ರೋಲರ್ಗಳಿಗಾಗಿಯೇ ಹಾಡೊಂದನ್ನು ಮಾಡಿ ಅದಕ್ಕೆ ಟ್ಯೂನ್ ಮಾಡಿ ಹಾಡುವುದನ್ನು ನೀವು ನೋಡಬಹುದು. ವಿಡಿಯೋದಲ್ಲಿ ವಿಪಾಶಾ ಗಿಟಾರ್ ನುಡಿಸುತ್ತಾ ತನ್ನದೇ ಆದ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು.
ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ವಾವ್.. ಹುಡುಗಿ ನೀವು ಎಂತಹ ಅದ್ಭುತವಾದ ಹಾಡನ್ನು ರಚಿಸಿದ್ದೀರಿ, ನೀವು ರಾಕ್‌ಸ್ಟಾರ್, ಸಾಹಿತ್ಯ ಹೊಂದಾಣಿಕೆಯಾಗದಿದ್ದರೂ ವೈಬ್ ಹೊಂದಿಕೆಯಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.