ನ್ಯೂಸ್

ರೂಮ್​ ಹೀಟರ್​ನಲ್ಲಿ ಚಪಾತಿ ಮಾಡಿದ ಮಹಿಳೆ; Viral Video ನೋಡಿ ರಿಸ್ಕಿ ಜುಗಾಡ್​​ ಎಂದ ನೆಟ್ಟಿಗರು

ಪ್ರಸ್ತುತ ಶೀತ ವಾತಾವರಣದಿಂದ ಜನರು ಕಂಗಾಲಾಗಿದ್ದಾರೆ. ದಿನನಿತ್ಯದ ಕೆಲಸಗಳನ್ನು ಮಾಡಲು ಸಹ ಜನರು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಳಿಯಿಂದಾಗಿ ಹಲವರು ಕೊಠಡಿ ಹೀಟರ್​ ಅನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆದರೆ ಮಹಿಳೆಯೊಬ್ಬರು ರೂಮ್​ ಹೀಟರ್ ಅನ್ನು ಗ್ಯಾಸ್​ನಂತೆ​ ಬಳಸಿ ಅಡುಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೋದಲ್ಲಿ ಹಾಸಿಗೆಯ ಮೇಲೆ ಕುಳಿತ ಮಹಿಳೆಯೊಬ್ಬರು ರೂಮ್​ ಹೀಟರ್​ ಮೇಲೆ ಚಪಾತಿ ಬೇಯಿಸುತ್ತಿರುವುದನ್ನು ನೋಡಬಹುದು. ಅದು ಸರಿಯಾಗಿ ಬೇಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹಲವು ಬಾರಿ ಚಪಾತಿಯನ್ನು ತಿರುಗಿಸಿ ಬೇಯುಸುತ್ತಿದ್ದಾರೆ. ಕೊನೆಯಲ್ಲಿ ಚಪಾತಿ ಬೆಂದಿದೆ ಎಂದು ತೋರಿಸಲು ಮಹಿಳೆಯು ಚಪಾತಿಯನ್ನು ಎರಡು ಭಾಗಗಳಾಗಿ ಮಾಡಿ ತೋರಿಸುವುದನ್ನು ಕಾಣಬಹುದು.

ಈ ವಿಡಿಯೋವನ್ನು ಇದುವೆರಗೂ 2.5ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿ ಹಲವು ಕಟ್‌ಗಳಿದ್ದು ಈ ಚಪಾತಿಯನ್ನು ಹೀಟರ್‌ನಲ್ಲಿ ಬೇಯಿಸಿಲ್ಲ ಬದಲಿಗೆ ಹೀಟರ್‌ನಲ್ಲಿಯೇ ಬೇಯಿಸಲಾಗಿದೆ ಎಂದು ತೋರಿಸುತ್ತಿದ್ದಾರೆ, ಪ್ರತಿ ಉತ್ಪನ್ನವು ಭಾರತದಲ್ಲಿ ದುರ್ಬಳಕೆಯಾಗಿದೆ!, ಹೀಟರ್​​ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಈ ರೀತಿ ಬೇಯಿಸಿದ ಚಪಾತಿ ತಿಂದರೆ ಖಾಯಿಲೆ ಬರುವುದು ಖಚಿತ, ರಿಸ್ಕಿ ಜುಗಾಡ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ಈ ರೀತಿಯ ಹೀಟರ್‌ನಲ್ಲಿ ರೊಟ್ಟಿ ಬೇಯಿಸುವುದು ಅತ್ಯಂತ ಅಪಾಯಕಾರಿ. ಏಕೆಂದರೆ ಅಂತಹ ಶಾಖೋತ್ಪಾದಕಗಳನ್ನು ಕೊಠಡಿ ಬಿಸಿ ಮಾಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥಗಳನ್ನು ಬೇಯಿಸಲು ಅಲ್ಲ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ನಡೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.