ದೀಪಾವಳಿ ಹಬ್ಬದ ಸಂಭ್ರಮದ ಗುಂಗಿಂದ್ದ ಹೊರಬಂದಿಲ್ಲ, ಇನ್ನೂ ಪಟಾಕಿ ಶಬ್ಧ ಕೇಳುತ್ತಲೆ ಇರುತ್ತದೆ. ಇತ್ತೀಚೆಗೆ ನಟ ಆರ್.ಮಾಧವನ್ ಅವರ ಪತ್ನಿ ಸರಿತಾ ಅವರು ತಮ್ಮ ದುಬೈ ಮನೆಯಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅಲ್ಲಿ ಮಾಧವನ್ ದಂಪತಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದನ್ನು ನೋಡಿದ್ದೇವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬ ನಟ ವಿವೇಕ್ ಒಬೆರಾಯ್ ಅವರ ವಿಡಿಯೋ ಹರಿದಾಡುತ್ತಿವೆ(Viral Video).
ಇದನ್ನು ಓದಿ: ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ; ಸೌತ್ ಬ್ಯೂಟಿ ಸಮಂತಾ ಹೀಗೆಳಿದ್ದೇಕೆ | Samantha Ruth Prabhu
ವೈರಲ್ ವಿಡಿಯೋದಲ್ಲಿ ಮನೆಯ ಮೂಲೆ ಮೂಲೆಯನ್ನೂ ತೋರಿಸಲಾಗಿದೆ. ಅದು ವಿವೇಕ್ ಒಬೆರಾಯ್ ಅವರು ದುಬೈ ನಿವಾಸವಾಗಿದೆ. ಕುಟುಂಬದೊಂದಿಗೆ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಿರುವುದನ್ನು ನೋಡಬಹುದು. ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸಲಾಗಿದೆ. ಅವರ ತಂದೆ ಮತ್ತು ನಟ ಸುರೇಶ್ ಒಬೆರಾಯ್, ಪತ್ನಿ ಪ್ರಿಯಾಂಕಾ ಆಳ್ವಾ, ತಾಯಿ ಮತ್ತು ಮಕ್ಕಳು ದೀಪಾವಳಿಯ ಹಬ್ಬದ ಸಂಭ್ರಮಾಚರಣೆಯಲ್ಲಿ ಇರುವುದನ್ನು ನೋಡಬಹುದು.
ವಿವೇಕ್ ಒಬೆರಾಯ್ ಅವರು ದಾಂಪತ್ಯ ಜೀವನಕ್ಕೆ 14 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಧನ್ತೇರಸ್ ಸಮಯದಲ್ಲಿ ದುಬೈ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ವ್ಯವಹಾರಕ್ಕಾಗಿ ಇಲ್ಲಿಗೆ ಕುಟುಂಬ ಸಮೇತರಾಗಿ ಸ್ಥಳಾಂತರಗೊಂಡಿರುವುದಾಗಿ ವಿವೇಕ್ ಒಬೆರಾಯ್ ತಿಳಿಸಿದ್ದಾಗಿ ಖಾಸಗಿ ವಾಹಿನಿಯೊಂದ ವರದಿ ಮಾಡಿದೆ
ವಿಡಿಯೋ ನೋಡಿದ ನೆಟ್ಟಿಗರು ವಿವೇಕ್ ಒಬೆರಾಯ್ ಅವರ ಕುಟುಂಬವನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದಾರೆ. ಬ್ರದರ್ಇದು ಅತ್ಯುತ್ತಮವಾಗಿದೆ, ನೀವು ಯಾವಾಗಲೂ ನಿಮ್ಮ ಹೆತ್ತವರ ಮಾತನ್ನು ಕೇಳಬೇಕು, ಎಂತಹ ಸುಂದರ ಮನೆ, ಬದುಕು ಹೀಗಿರಬೇಕು, ಸಂಸ್ಕೃತಿ ಹೊಂದಿದ ಭಾರತೀಯ ಕುಟುಂಬ ಎಂದು ಕಾಮೆಂಟ್ ಮಾಡಿದ್ದಾರೆ.