ನ್ಯೂಸ್

ಮದುವೆ ಮೆರವಣಿಗೆಯಲ್ಲಿ ವಿದೇಶಿಯರ ಡ್ಯಾನ್ಸ್​​​; Viral Video ನೋಡಿ ಮೆಚ್ಚಿದ ನೆಟ್ಟಿಗರು

ಬನಾರಸ್ ಹಲವು ಕಾರಣಗಳಿಂದ ಪ್ರಸಿದ್ಧವಾಗಿದೆ. ಜನರು ಬನಾರಸ್​​ಗೆ ಶಾಂತಿಯನ್ನು ಹುಡುಕುತ್ತಾ ಬರುತ್ತಾರೆ. ಬಾಬಾ ವಿಶ್ವನಾಥರ ಪವಿತ್ರ ಭೂಮಿಗೆ ಬರುವುದು ತುಂಬಾ ಅದೃಷ್ಟವೆಂದು ಭಾವಿಸುತ್ತಾರೆ. ವಿದೇಶಿ ಪ್ರವಾಸಿಗರು ಕೂಡ ಈ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ನಗರದ ಸೌಂದರ್ಯವನ್ನು ನೋಡುವುದರ ಜತೆಗೆ ಇಲ್ಲಿನ ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಅಂತಹದ್ದೇ ಇಬ್ಬರು ವಿದೇಶಿ ಮಹಿಳೆಯರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಮದುವೆ ಮೆರವಣಿಗೆಯಲ್ಲಿ ಸೇರಿಕೊಂಡು ವರನ ಬದಿಯಲ್ಲಿ ನೃತ್ಯ ಮಾಡಲು ಪ್ರಾರಂಭಿಸುವುದನ್ನು ನೋಡಬಹುದು. ಇದರಲ್ಲಿ ಇಬ್ಬರೂ ವೃದ್ಧ ವಿದೇಶಿ ಮಹಿಳೆಯರು ಭೋಜ್‌ಪುರಿ ಹಾಡಿಗೆ ಪೂರ್ಣ ಉತ್ಸಾಹದಿಂದ ಸಂತೋಷದಿಂದ ನೃತ್ಯ ಮಾಡುತ್ತಾರೆ. ಈ ಸಮಯದಲ್ಲಿ ಅವರಿಗೆ ಇತರ ಭಾರತೀಯ ಮಹಿಳೆಯರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.

ವೈರಲ್ ವಿಡಿಯೋವನ್ನು ಮೆಚ್ಚಿಕೊಂಡು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಬನಾರಸ್​ ಅದ್ಭುತವಾಗಿದೆ, ವಿದೇಶಿಗರಿಗೆ ಇದು ಇಷ್ಟವಾಗುತ್ತದೆ, ಮದುವೆ ಮೆರವಣಿಗೆಯಲ್ಲಿ ವಿದೇಶಿ ಮಹಿಳೆಯರು ನೃತ್ಯ ಚೆನ್ನಾಗಿದೆ, ಯಾರಿಗೆ ಆದರೂ ನಮ್ಮ ಬೆಂಬಲ ಸೂಚಿಸುವುದು ಭಾರತೀಯರ ಗೌರವ ಎಂದು ಕಾಮೆಂಟ್​ ಮಾಡಿದ್ದಾರೆ.