ನ್ಯೂಸ್

ಹೆಲ್ಟೆಟ್​ ಧರಿಸದೆ ಬೈಕ್​ನಲ್ಲಿ ಸ್ಟಂಟ್​ ಮಾಡಿದ ಯುವತಿ... ವಿಡಿಯೋ ವೈರಲ್​! Bike Stunt

ಮಧ್ಯಪ್ರದೇಶ: ನಡುರಸ್ತೆಯಲ್ಲಿ ಯುವತಿಯೊಬ್ಬಳು ಹೆಲ್ಮೆಟ್​ ಧರಿಸದೆ ಅಪಾಯಕಾರಿ ಸ್ಟಂಟ್​ ( Bike Stunt) ಮಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬುಧವಾರ (ಅ.22) ವೈರಲ್​ ಆಗಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆಯೇ ಪೊಲೀಸರು ಮಹಿಳೆಯನ್ನು ಗುರುತಿಸಿದ್ದು, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ತಿಳಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಯುವತಿಯೊಬ್ಬಳು ಹೆಲ್ಮೆಟ್​ ಇಲ್ಲದೇ ವೇಗವಾಗಿ ಗಾಡಿ ಓಡಿಸುತ್ತಾ ರೀಲ್ಸ್​ ಮಾಡುತ್ತಿದ್ದಾಳೆ. ಈ ವೇಳೆ ಆಕೆ ತನ್ನ ಎರಡೂ ಕೈಗಳನ್ನು ಹ್ಯಾಂಡಲ್​ಗಳಿಂದ ತೆಗೆದು ಹುಚ್ಚಾಟ ಮೆರೆಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ಟೀಕೆಗಳು ವ್ಯಕ್ತವಾಗಿದ್ದು, ನೆಟಿಜನ್​ಗಳು ಆಕೆಯ ಅಸಡ್ಡೆ ಮತ್ತು ಅಸುರಕ್ಷಿತ ನಡವಳಿಕೆ ಬಗ್ಗೆ ಖಂಡಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಯುವತಿಯ ಹುಚ್ಚು ಸಾಹಸದ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ದಂಡ ಪಡಿಸಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)