ಮುಂಬೈ: ವಾಸಿಸಲು ಸ್ಥಳವಿಲ್ಲದ ನಿರ್ಗತಿಕರು ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣ ಹಾಗೂ ಖಾಲಿ ಇರುವ ಪ್ರದೇಶಗಳಲ್ಲಿ ವಾಸವಾಗಿರುವುದನ್ನು ನಾವು ನೋಡಿದ್ದೇವೆ. ಆದ್ರೆ ರೈಲ್ವೆ ಹಳಿ ಮೇಲೆ ಬಿಡು ಬಿಟ್ಟಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಹಿಮ್ ಪ್ರದೇಶ ಸ್ಥಳೀಯರು ಅಕ್ರಮವಾಗಿ ರೈಲ್ವೆ ಹಳಿಯನ್ನು ಸುತ್ತುವರೆಸಿಕೊಂಡಿದ್ದಾರೆ. ರೈಲ್ವೆ ಹಳಿ ಮೇಲೆ ಜನರು ಅಡುಗೆ ಮಾಡುತ್ತಾ, ಬಟ್ಟೆ ಒಣಗಿಸಿದ್ದಾರೆ. ಇತ್ತ ಮಕ್ಕಳು ಓದುತ್ತಿರುವ ದೃಶ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಸತಿರಹಿತ ಜನರು, ಭಿಕ್ಷಕರು ಅಲ್ಲಿಯೆ ವಾಸವಾಗಿರುವುದು ಕಂಡುಬಂದಿದೆ. ಆದರೆ ಈ ಟ್ರ್ಯಾಕ್ನಲ್ಲಿ ರೈಲು ಸಂಚಾರ ಮಾಡುತ್ತಿದ್ಯಾ? ಇಲ್ಲವಾ? ಎನ್ನುವ ಮಾಹಿತಿ ಇಲ್ಲ.
ಸಮಾಜಿಕ ಜಾಲತಾಣದಲ್ಲಿ ಹರಿದಾಡುವ ದೃಶ್ಯವನ್ನು ಕಂಡು ರೈಲ್ವೆ ಸಂರಕ್ಷಣೆ ಪಡೆ ಅಲ್ಲಿ ವಾಸಿಸುವ ನಿರ್ಗತಿಕರನ್ನು ತೆರುವುಗೊಳಿಸಿದ್ದರು. ಆದರೆ ಮತ್ತೆ ಭಾನುವಾರ ಮಕ್ಕಳು ಓಡಾಡುವ ಹಾಗೂ ಜನರು ಮಲಗಿರುವ ಬಟ್ಟೆ ಒಣಗಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಇದು ಇಲ್ಲಿ ಮುಗಿಯಲಾರದ ಸಮಸ್ಯೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೈನ್ ಬಂದ್ರೆ ಏನು ಮಾಡುತ್ತಾರೆ? ಈ ಟ್ರ್ಯಾಕ್ ಮೇಲೆ ರೈಲು ಬರಲ್ವಾ? ಅಧಿಕಾರಿಗಳನ್ನ ಅಪಹಾಸ್ಯ ಮಾಡಿದ್ದಾರೆ ರೈಲ್ವೆ ಹಳಿಯ ಚಟುವಟಿಕೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗನ್ನು ಟೀಕಿಸಿದ್ದಾರೆ.
ರೈಲ್ವೆ ಸಂರಕ್ಷಣ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ರೈಲ್ವೆ ಹಳಿಯಲ್ಲಿ ಅನಧಿಕೃತ ಚಟುವಟಿಕೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಅಧಿಕಾರದಿಂದ ತಗೆಯಲಾಗಿದೆ. ರೈಲ್ವೆ ಆವರಣದ ಸುರಕ್ಷತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ರೈಲ್ವೆ ಅಧಿಕಾರಿಗಳ ಸಮಸ್ಯೆಯನ್ನು ತಿಳಿಸಿದ್ದಾರೆ. ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.