- ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ
- ಫುಡ್ ಡೆಲಿವರಿಗೆ ಹೋದ ಯುವಕ ಫುಲ್ ಗಾಬರಿ
- ಗೇಟ್ ಬಳಿ ಹೋದ ಡೆಲಿವರಿ ಬಾಯ್ ಮುಂದೆ ಮಾಡಿದ್ದೇನು?
Viral Video: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್, ವಿಡಿಯೋಗಳನ್ನು ಮಾಡೋದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಧಿಕ ಲೈಕ್ಸ್, ವೀವ್ಸ್, ಫಾಲೋವರ್ಸ್ ಪಡೆಯೋದು ಹಲವರಿಗೆ ಹುಚ್ಚಾಟ ಆಗೋಗಿದೆ. ಇದರಿಂದ ಅನ್ಯರಿಗೆ ಕಿರಿಕಿರಿ, ಸಮಸ್ಯೆ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದರ ಕಿಂಚಿತ್ತು ಅರಿವು ಅಂಥವರಿಗೆ ಇರುವುದಿಲ್ಲ ಎಂಬುದೇ ನಿಜಕ್ಕೂ ದೊಡ್ಡ ದುರಂತ.
ವೀವ್ಸ್, ಲೈಕ್ಸ್ ಹುಚ್ಚು!
ಕೆಲವರು ವೀವ್ಸ್ ಹುಚ್ಚಿನಿಂದ ಯಾವ ಹಂತಕ್ಕೆ ಹೋಗ್ತಾರೆ ಎಂಬುದನ್ನು ಊಹಿಸಲು ಅಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ, ಇತ್ತೀಚೆಗಷ್ಟೇ, ಕೇರಳದಲ್ಲಿ ಯುವತಿಯೊಬ್ಬಳು ಲೈಕ್ಸ್, ನೆಟ್ಟಿಗರ ಗಮನ ಸೆಳೆಯಲು ತನಗೆ ಬಸ್ಸಿನಲ್ಲಿ ಅಸಭ್ಯವಾಗಿ ಒಬ್ಬ ವ್ಯಕ್ತಿ ವರ್ತಿಸಿದ ಎಂದು ಸುಖಾಸುಮ್ಮನೆ ವಿಡಿಯೋ ಮಾಡಿ, ಅದನ್ನು ಹರಿಬಿಟ್ಟು ಇಂದು ಆತನ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾಳೆ. ಸದ್ಯ ಇಲ್ಲೊಬ್ಬಳು ಮಹಿಳೆ ಕೂಡ ವೀವ್ಸ್, ಲೈಕ್ಸ್ ಹಿಂದೆ ಹೋಗಿರುವುದು ಆಕೆ ಮಾಡಿದ ಬಿರಿಯಾನಿ ಆರ್ಡರ್ ಮೂಲಕ ಸ್ಪಷ್ಟವಾಗಿದೆ.
ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್ ಮಾಡಿದ ಮಹಿಳೆಗೆ, ಊಟ ತಲುಪಿಸಲು ಆಕೆಯಿದ್ದ ಸ್ಥಳಕ್ಕೆ ಬಂದ ಡೆಲಿವರಿ ಬಾಯ್ಗೆ ಆಗಿದ್ದು ಮಾತ್ರ ಭಯಾನಕ ಅನುಭವ. ಕಾರಣ, ಡೆಲಿವರಿಗೆ ಆತ ನಿಂತಿದ್ದು ಸ್ಮಶಾನದ ಗೇಟ್ ಮುಂಭಾಗದಲ್ಲಿ. ಒಂದು ನಿಮಿಷ ಏನು ಮಾಡಬೇಕೆಂದು ತಿಳಿಯದೆ, ಭಯದಲ್ಲಿ ಒಳಗೆ ಹೋಗದ ಆತ, ಆರ್ಡರ್ ಮಾಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಆಗ, ಆಕೆ ಆಡಿದ ಮಾತುಗಳನ್ನು ಕೇಳಿ ಡೆಲಿವರಿ ಬಾಯ್ಗೆ ಬೆವರಿಳಿದಿದೆ.
ಇಬ್ಬರ ನಡುವಿನ ಸಂಭಾಷಣೆ ಏನು?
ಡೆಲಿವರಿ ಬಾಯ್: ಮೇಡಂ, ನಾನು ಕೊಟ್ಟಿರುವ ಲೋಕೋಷನ್ ಅಲ್ಲಿದ್ದೀನಿ. ಈಗ ಎಲ್ಲಿಗೆ ಬರಬೇಕು?
ಮಹಿಳೆ: ನೇರವಾಗಿ ಬನ್ನಿ, ಅಲ್ಲಿ ನಾಯಿಯೊಂದು ಕುಳಿತಿದೆ. ಕಾಣಿಸುತ್ತ?
ಡೆಲಿವರಿ ಬಾಯ್: ಮೇಡಂ, ಇದು ಸ್ಮಶಾನ.
ಮಹಿಳೆ: ನಿಮಗೆ ನಾಯಿ ಕಾಣಿಸ್ತಾ? ಹಾಗೆ ನೇರವಾಗಿ ಸ್ಮಶಾನದ ಗೇಟ್ ಒಳಗೆ ಬನ್ನಿ
ಡೆಲಿವರಿ ಬಾಯ್: ನೀವು ಸ್ಮಶಾನದಿಂದ ಫುಡ್ ಆರ್ಡರ್ ಮಾಡಿದ್ದೀರಾ? ನೀವೇ ಹೊರಬಂದು ತೆಗೆದುಕೊಳ್ಳಿ. ಇಲ್ಲವಾದ್ರೆ ಆರ್ಡರ್ ಕ್ಯಾನ್ಸಲ್ ಮಾಡ್ತೀನಿ
ಮಹಿಳೆ: ಭಯಪಡಬೇಡಿ, ನಾನಿಲ್ಲೇ ಇದ್ದೀನಿ. ನಿಮಗೆ ದೆವ್ವಗಳು ಎಂದ್ರೆ ಭಯವೇ? ಎಂದು ನಗುತ್ತಾ ಕೇಳುತ್ತಾಳೆ.
ಸ್ಮಶಾನದಿಂದ ಮಾತನಾಡುತ್ತಿರುವ ಮಹಿಳೆಯ ಧ್ವನಿಯಲ್ಲಿ ಯಾವುದೇ ಭಯವಿಲ್ಲ ಹಾಗೂ ತುಂಬಾ ಶಾಂತವಾಗಿ ಮಾತನಾಡುತ್ತಿರುವುದು ಸದ್ಯ ಹಲವರನ್ನು ಬೆದರಿಸಿದೆ. ಕೆಲವರು ಈ ವಿಡಿಯೋ ಸುಮ್ಮನೆ ಭಯ ಹುಟ್ಟಿಸಲು ಮಾಡಿರುವುದೇ ಅಥವಾ ಸ್ನೇಹಿತರ ಜತೆಗೂಡಿ ವೀವ್ಸ್ ಹುಚ್ಚಾಟಕ್ಕೆ ಹೀಗೆ ಮಾಡಿದಳೇ? ಎಂದು ಕೇಳಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).