ನ್ಯೂಸ್

ಬೀಚ್​ನಲ್ಲಿ 1 ಸೆಲ್ಫಿಗೆ ₹ 100 ಎಂದ ರಷ್ಯನ್​ ಮಹಿಳೆ; ಜನರು ಮಾಡಿದ್ದೇನು ನೀವೇ ನೋಡಿ.. | Viral Video

ಭಾರತದಲ್ಲಿನ ಗೋವಾ ರಾಜ್ಯಕ್ಕೆ ಭೇಟಿ ನೀಡಲು ಬಂದಿದ್ದ ರಷ್ಯಾದ ಏಂಜಲೀನಾ ಅವರ ಸೃಜನಶೀಲ ಕಲ್ಪನೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಾರೆ(Viral Video). ಭಾರತದಲ್ಲಿ ವಿದೇಶಿಗರನ್ನು ನೋಡುವುದೇ ಇಲ್ಲಿನ ಕೆಲವರಿಗೆ ವಿಭಿನ್ನ ಅನುಭವ. ಇದರಿಂದಾಗಿ ಕೆಲವರು ಸಮಯ ವ್ಯರ್ಥ ಮಾಡದೆ ತಕ್ಷಣವೇ ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗುತ್ತಾರೆ. ಗೋವಾದ ಕಡಲತೀರದಲ್ಲಿನ ಪ್ರವಾಸಿಗರು ಏಂಜಲೀನಾ ಜತೆ ಅದೇ ರೀತಿ ನಡೆದುಕೊಂಡಿದ್ದಾರೆ.

ಇದನ್ನು ತಪ್ಪಿಸಲು ಏಂಜಲೀನಾ ಅವರು ತುಂಬಾ ವಿಭಿನ್ನವಾದ ಉಪಾಯವನ್ನು ಮಾಡಿದ್ದಾರೆ. ಫೋಟೋಗಳಿಗಾಗಿ ವಿನಂತಿಸುವವರಿಗೆ ಒಂದು ಸೆಲ್ಫಿಗೆ 100 ರೂಪಾಯಿ ಎಂದು ಹೇಳಿದ್ದಾರೆ. ಆಕೆಯ ಐಡಿಯಾ ಮತ್ತು ನಂತರ ಏನಾಯಿತು ಎಂಬ ವಿಡಿಯೋ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​​ ವಿಡಿಯೋದಲ್ಲಿ ರಷ್ಯಾದ ಮಹಿಳೆ ಭಾರತೀಯ ಬೀಚ್‌ಗಳಲ್ಲಿ ಎಲ್ಲರೂ 1 ಫೋಟೋ ಮೇಡಮ್ ಎಂದು ಹೇಳುತ್ತಿದ್ದಾರೆ ಎಂದು ಹೇಳುವುದನ್ನು ನೋಡಬಹುದು. ಇದನ್ನು ತಪ್ಪಿಸಲು ನಾನು ಪರಿಹಾರವನ್ನು ಕಂಡುಕೊಂಡಿದ್ದೇನೆ. 1 ಸೆಲ್ಫಿಗೆ 100 ರೂ. ಎಂದು ಬರೆದು ಪೋಸ್ಟ್ ಅನ್ನು ಹಿಡಿದು ಸಮುದ್ರತೀರದಲ್ಲಿ ತಿರುಗುತ್ತಾಳೆ. ಬಳಿಕ ಅನೇಕರು ಅವರ ಬಳಿಗೆ ಬಂದು 100 ರೂ. ಕೊಟ್ಟು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ತಲಾ 100 ರೂಪಾಯಿ ನೀಡುತ್ತಿರುವುದನ್ನು ಕಾಣಬಹುದು

ವಿಡಿಯೋ ಕೊನೆಯಲ್ಲಿ ಏಂಜಲೀನಾ ಅವರು ದಿನವಿಡೀ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಉತ್ತಮ ಹಣವನ್ನು ಗಳಿಸಿದ್ದಾರೆ ಎಂದು ತೋರಿಸುತ್ತಾರೆ. ಆದರೆ ಅವರು ಇದರಿಂದ ಎಷ್ಟು ಹಣ ಸಂಗ್ರಹಿಸಿದರು ಎಂದು ನಿಖರವಾಗಿ ಅಂದಾಜು ಮಾಡುವುದು ಕಷ್ಟ. ಆದರೆ ಪೋಸ್ಟರ್ ಹಿಡಿದು ತಿರುಗಾಡುತ್ತಿದ್ದಾಗ ಸುಮಾರು 4 ರಿಂದ 5 ಜನರೊಂದಿಗೆ ಫೋಟೋ ತೆಗೆಸಿಕೊಂಡರು. ರಷ್ಯಾದ ರೂಬಲ್‌ನಲ್ಲಿ ಭಾರತೀಯ ರೂಪಾಯಿ 500 ಸರಿಸುಮಾರು 588 ರೂಬಲ್‌ಗಳಿಗೆ ಸಮನಾಗಿರುತ್ತದೆ.

ಈ ವಿಡಿಯೋವನ್ನು ಇದುವರೆಗೂ 32 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಆಕೆಯ ಸೃಜನಶೀಲ ಕಲ್ಪನೆಗಾಗಿ ರಷ್ಯಾದ ಮಹಿಳೆಯನ್ನು ಹೊಗಳುತ್ತಿದ್ದಾರೆ. ನೀವು ನಿಜವಾದ ವ್ಯಾಪಾರವನ್ನು ಕಂಡುಕೊಂಡಿದ್ದೀರಿ, ಇದನ್ನು ವ್ಯಾಪಾರ ಎಂದು ಕರೆಯಲಾಗುತ್ತದೆ, ಭಾರತಕ್ಕಿಂತ ಭಾರತೀಯರನ್ನು ಚೆನ್ನಾಗಿ ತಿಳಿದಿದ್ದಾಳೆ, ಭಾರತವು ವಿದೇಶಿಯರಿಗೆ ಹಣ ಸಂಪಾದಿಸುವ ಸ್ಥಳವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.