ನ್ಯೂಸ್

ಅಡ್ವೆಂಚರ್ ಐಲ್ಯಾಂಡ್‌ನಲ್ಲಿ ಮಧ್ಯದಲ್ಲಿ ನಿಂತು ಎಲ್ಲರನ್ನೂ ಹೆದರಿಸಿದ ರೋಲರ್‌ಕೋಸ್ಟರ್ ವಿಡಿಯೋ ವೈರಲ್

ಇಂಗ್ಲೆಂಡ್: ರೋಲರ್ ಕೋಸ್ಟರ್ ರೈಡ್ ಮಾಡುವುದೆಂದರೆ ಕೆಲವರಿಗೆ ಸಿಕ್ಕಾಪಟ್ಟೆ ಕ್ರೇಜ್..ಇದೊಂದು ರೀತಿ ಸಾಹಸಮಯ ಸವಾರಿ. ಅದನ್ನು ಹತ್ತಿದ ನಂತರವೇ ರಿಯಲ್ ಕಹಾನಿ ಶುರುವಾಗುವುದು. ಕೆಲವರು ಮಾತ್ರ ಅದನ್ನು ನೋಡಿ ಆನಂದಿಸುತ್ತಾರೆ. ಅಪ್ಪಿ ತಪ್ಪಿಯೂ ಏರುವುದಿಲ್ಲ. ಇತ್ತೀಚೆಗಷ್ಟೇ ಇಂಗ್ಲೆಂಡಿನಲ್ಲೊಂದು ಘಟನೆ ನಡೆಯಿತು. ಕೆಲವರು ಇಲ್ಲಿನ ಸೌತೆಂಡ್‌ನಲ್ಲಿರುವ ಜನಪ್ರಿಯ ಅಡ್ವೆಂಚರ್ ಐಲ್ಯಾಂಡ್‌ನಲ್ಲಿ 72 ಅಡಿ ಎತ್ತರದ ರೋಲರ್‌ಕೋಸ್ಟರ್ ಏರಿದ್ದಾರೆ. ಸ್ವಲ್ಪ ಹೊತ್ತು ಚೆನ್ನಾಗಿ ಸಾಗಿದ ರೋಲರ್‌ಕೋಸ್ಟರ್ ಮಧ್ಯದಲ್ಲಿಯೇ ನಿಂತಿತು. ಆದರೆ ರೋಲರ್‌ಕೋಸ್ಟರ್ ಅಷ್ಟು ಎತ್ತರದಲ್ಲಿ ನಿಂತರೆ ನಿಮ್ಮ ಸ್ಥಿತಿ ಏನಾಗಬಹುದು?. ಅಚ್ಚರಿಯೆಂದರೆ ಅದು ನಿಂತದ್ದೇಕೆ ಎಂದು ಅದರಲ್ಲಿದ್ದವರಿಗೆ ಅರ್ಥವಾಗದೆ ನಡುಗಿದರು. ಆದರೆ ಬಹಳ ಪ್ರಯತ್ನದ ನಂತರ ಅವರೆಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ತರಲಾಯಿತು. ಆ ಅನುಭವವನ್ನು ಅವರು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಬಿಡಿ, ಅಂದಹಾಗೆ ಇದು ಹೇಗೆ ಸಂಭವಿಸಿತು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ವಿವರಿಸಿರುವುದನ್ನು ನೀವಿಲ್ಲಿ ಓದಬಹುದು...

"ಎಲ್ಲರೂ ಬಹಳ ಸಂತೋಷದಿಂದ ರೋಲರ್ ಕೋಸ್ಟರ್‌ಗೆ ಹತ್ತಿದರು. ಸ್ವಲ್ಪ ಸಮಯದವರೆಗೆ ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿದರು. ಆದರೆ ಅದು ಇದ್ದಕ್ಕಿದ್ದಂತೆ ನಿಂತಿತು. ಅದು ಏಕೆ ನಿಂತಿತು ಎಂದು ನಮಗೆ ಅರ್ಥವಾಗಲಿಲ್ಲ. ಎಲ್ಲರೂ ಜೋರಾಗಿ ಕಿರುಚಿದರು. ಕೆಳಗೆ ಬೀಳುತ್ತೇವೆ ಎಂದು ಹೆದರಿದರು. ಅದು ನೇರವಾಗಿ ನಿಂತಿತ್ತು. ಸುಮಾರು 45 ನಿಮಿಷಗಳ ಕಾಲ ಅವರು ಹಾಗೇ ಇದ್ದರು. ಅದೃಷ್ಟವಶಾತ್ ಇಲ್ಲಿನ ಆಡಳಿತ ಮಂಡಳಿಯವರು ತಕ್ಷಣ ಸ್ಪಂದಿಸಿ ಗಾಬರಿಯಾಗದಂತೆ ಎಚ್ಚರಿಕೆಯಿಂದ ಕೆಳಗಿಳಿಸಿದ್ದಾರೆ. ಸ್ವಲ್ಪ ಜಾರಿ ಬಿದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯವಾಗುತ್ತಿತ್ತು''.

-ಪ್ರತ್ಯಕ್ಷದರ್ಶಿ

ಈ ಹಿಂದೆ ಅಮೆರಿಕದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದ ಕ್ರಾಂಡನ್ ಪಾರ್ಕ್ ಫಾರೆಸ್ಟ್ ಕೌಂಟಿ ಫೆಸ್ಟಿವಲ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಹಲವರು ರೋಲರ್ ಕೋಸ್ಟರ್ ರೈಡ್‌ಗೆಂದು ತೆರಳಿದರು. ಈ ರೈಡ್ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ತಾಂತ್ರಿಕ ದೋಷ ಗಮನಕ್ಕೆ ಬಂದಿತು. ಅದು ಮಧ್ಯದಲ್ಲಿ ನಿಂತಿತು. ರೈಡ್ ಗೆ ಹೋದವರೆಲ್ಲ ತಲೆಕೆಳಗಾಗಿ ನೇತಾಡುತ್ತಿದ್ದರು. ಅಲ್ಲೇ ಇರಬೇಕಿತ್ತು. ಸ್ವಲ್ಪ ಹಿಡಿತ ತಪ್ಪಿದರೂ ಪ್ರಾಣ ಕಳೆದುಕೊಳ್ಳುತ್ತಿದ್ದರು. ಮೂರು ಗಂಟೆಗಳ ಕಾಲ ಎಲ್ಲಾ ಜನರು ತಮ್ಮ ಪ್ರಾಣವನ್ನು ಹಿಡಿದಿಟ್ಟುಕೊಂಡಿದ್ದರು. ಮೂರು ತಾಸಿನ ಬಳಿಕ ಸಮಸ್ಯೆ ಬಗೆಹರಿದು ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಇದಕ್ಕೆ ಸಂಬಂಧಿಸಿದ ಭಯಾನಕ ವಿಡಿಯೋ ವೈರಲ್ ಆಗಿತ್ತು.