ಗಾಂಧಿನಗರ: ಗುಜರಾತ್ನಲ್ಲಿ ಚಲಿಸುತ್ತಿದ್ದ ರೈಲು ಹತ್ತುವಾಗ ಪ್ರಯಾಣಿಕರೊಬ್ಬರು ಕಾಲುಜಾರಿ ಕೆಳಗಿ ಬೀಳುತ್ತಾರೆ. ರೈಲಿನ ಕೆಳಗೆ ಬಿದ್ದು ಆ ವ್ಯಕ್ತಿಯು ನಜ್ಜುಗುಜ್ಜಾಗಬೇಕಿತ್ತು. ಆದರೆ ಪೊಲೀಸ್ ಕಾನ್ಸ್ಟೇಬಲ್ ಅವರ ಸಮಯಪ್ರಜ್ಞೆಯಿಂದ ಆ ವ್ಯಕ್ತಿ ಬಚಾವ್ ಆಗಿದ್ದಾರೆ. ಸದ್ಯ ಈ ವಿಡಿಯೋ (Viral VIdeo)ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ.
ಇದನ್ನು ಓದಿ: ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್; ಕೋಪದ ಹಿಂದಿನ ಕಾರಣ ಇದೇ ನೋಡಿ.. | Narhari Jhirwal
ಅಲ್ಪೇಶ್ ಚೌಹಾಣ್ ಎಂಬ ವ್ಯಕ್ತಿ ವಾಪಿಯಿಂದ ಭರೂಚ್‌ನಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯವಳಿ ರೆಕಾರ್ಡ್ ಆಗಿದೆ. ವೈರಲ್ ವಿಡಿಯೋದಲ್ಲಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತುವಾಗ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಿಂದ ಕೆಳಗೆ ಬಿದ್ದಿದ್ದಾರೆ. ಸಮೀಪದಲ್ಲಿಯೇ ನಿಂತಿದ್ದ ಪೊಲೀಸ್ ಕಾನ್ಸ್ಟೇಬಲ್ ಯೋಗೇಶ್ ಜಗುಭಾಯ್ ಅವರು ಕೂಡಲೇ ಆತನನ್ನು ಹೊರತೆಗೆದಿದ್ದಾರೆ. ಗುಜರಾತ್ ಪೊಲೀಸರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಕಾನ್ಸ್ಟೇಬಲ್ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸೆಲ್ಯೂಟ್, ಗುಡವರ್ಕ್, ಪೊಲೀಸ್ ಕಾವಲು ಇಲ್ಲದ ಸ್ಥಳವಿಲ್ಲ ನಿಮಗೆ ಸೆಲ್ಯೂಟ್ ಬ್ರದರ್, ನನಗಿರುವುದು ಒಂದೇ ಹೃದಯ ಗುಜರಾತ್ ಪೊಲೀಸರು ಎಷ್ಟು ಬಾರಿ ಗೆಲ್ಲುತ್ತಾರೆ, ಗುಜರಾತ್ ಪೊಲೀಸರ ಬಗ್ಗೆ ಹೆಮ್ಮೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)