ಇಸ್ಲಾಮಾಬಾದ್: ಭಾರತದಲ್ಲಿ ಅಕ್ಟೋಬರ್ 3ರಿಂದ ನವರಾತ್ರಿ ಹಬ್ಬದ ಸಂಭ್ರಮಾಚರಣೆ ಆರಂಭವಾಗಿದೆ. ಆದರೆ ನೆರೆರಾಷ್ಟ್ರ ಪಾಕಿಸ್ತಾನದಲ್ಲಿಯೂ ಹಿಂದೂಗಳು ವಾಸಿಸುತ್ತಿದ್ದಾರೆ ಎಂಬುದನ್ನು ಯಾರು ಮರೆಯುವಂತಿಲ್ಲ. ಅಲ್ಲಿಯೂ ಹಿಂದೂ ಹಬ್ಬಗಳ ಸಮಯದಲ್ಲಿ ಶಾಂತಿಯುತವಾಗಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಕ್ಕೆ ಪೂರಕವೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)
ಆಗುತ್ತಿದೆ. ವ್ಯಕ್ತಿಯೊಬ್ಬರು ಪಾಕಿಸ್ತಾನದ ದೇವಸ್ಥಾನದಲ್ಲಿ ನವರಾತ್ರಿಯ ಸಂಭ್ರಮದ ವಿಡಿಯೋ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ದೇವಸ್ಥಾನದ ಹೊರಗೆ ಮಾತೆ ದುರ್ಗೆಯ ದೊಡ್ಡ ಚಿತ್ರವಿದ್ದು, ಇಡೀ ಬೀದಿಯನ್ನು ದೀಪಗಳಿಂದ ಅಲಂಕರಿಸಿರುವುದನ್ನು ಕಾಣಬಹುದು. ಇದಲ್ಲದೆ ಮಾತಾ ರಾಣಿಯ ದೇವಾಲಯವನ್ನು ಸಹ ಅಲಂಕಾರಗೊಳಿಸಲಾಗಿದೆ. ರಸ್ತೆಯನ್ನು ದೀಪಾಲಂಕೃತದಿಂದ ಮಿಂಚುತ್ತಿರುವುದನ್ನು ನೋಡಬಹುದು.
ನವರಾತ್ರಿಯ ನಾಲ್ಕನೇ ದಿನದ ದೃಶ್ಯದ, ಸುಮಾರು 23 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಗೂ 10 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲರೂ ಉತ್ತಮ ಹಬ್ಬವನ್ನು ಹೊಂದಿದ್ದೀರಿ ಎಂದು ಭಾವಿಸುತ್ತೇವೆ!, ಯುಕೆಯಿಂದ ಶುಭಾಶಯಗಳು, ಭಾರತದ ಮುಂಬೈನಿಂದ ಒಂದು ದೊಡ್ಡ ಹಲೋ!, ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಸಹೋದರ ಸಹೋದರಿಯರಿಗೆ ನವರಾತ್ರಿಯ ಶುಭಾಶಯಗಳು ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)