ಕರೊನಾ ವೈರಸ್ ಹಾವಳಿ ತಡೆಯಲು ಕೇಂದ್ರ ಸರ್ಕಾರ ಲಾಕ್ಡೌನ್ ಅನ್ನು 2 ವಾರಗಳ ವಿಸ್ತರಿಸಿದ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಮೊಸಳೆಯೊಂದು ನೆಲದಿಂದ ನೀರಿನ ಕೊಳಕ್ಕೆ ಇಳಿಯುವ ವಿಡಿಯೋ ವೈರಲ್ ಆಗಿದೆ.
ಲಾಕ್ಡೌನ್ ವಿಸ್ತರಣೆಯಾಗಿರುವುದರಿಂದ ನಾನು ಹೋಗುತ್ತಿದ್ದೇನೆ. ಲಾಕ್ಡೌನ್ ಮುಗಿದ ನಂತರ ನೀರಿನಿಂದ ಮೇಲೆ ಬರುತ್ತೇನೆ ಎನ್ನುವ ಭಾವನೆ ಸೃಷ್ಟಿಸಲು ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಏ.30ರಂದು ತಮ್ಮಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಹಳೇಯ ದೃಶ್ಯವನ್ನು ಕೆಲವರು ಮತ್ತೊಮ್ಮೆ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋ ಮೊರಾಕೊದ ಮೃಗಾಲಯದ್ದು, ಇದನ್ನು ಪರ್ವಿನ್ ಅವರು ವಾಟ್ಸಾಪ್ ಮೂಲಕ ಪಡೆದು ತಮ್ಮ ಟ್ವಿಟರ್ ಖಾತೆಗೆ ಅಪ್ಲೋಡ್ ಮಾಡಿದ್ದರು.
ಕೇಂದ್ರ ಸರ್ಕಾರ ಇನ್ನು 2 ವಾರಗಳ ಕಾಲ ಲಾಕ್ಡೌನ್ ವಿಸ್ತರಣೆ ಮಾಡಿದೆ. ಹೀಗಾಗಿ ನಾನು ಮತ್ತೆ ನನ್ನ ಮನೆಗೆ ಹೋಗುತ್ತಿದ್ದೇನೆ. ಲಾಕ್ಡೌನ್ ಮುಗಿದ ನಂತರ ನೀರಿನ ಮೇಲಿಂದ ಬರುತ್ತೇನೆ ಎಂದು ವಿಡಿಯೋ ಕ್ಲಿಪ್ಗೆ ಶೀರ್ಷಿಕೆ ನೀಡಲಾಗಿದೆ.
ಮತ್ತೊಮ್ಮೆ ಮರು ಹಂಚಿಕೆಯಾಗಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಕೆಲವೇ ಸಮಯದಲ್ಲಿ 30 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)