ನ್ಯೂಸ್

ಕೈಯಲ್ಲಿ ಬ್ಲೇಡ್​, ಎಸ್ಕೆಪ್​ ಆಗಲು ಯತ್ನ! ಸಿಸಿಟಿವಿಯಲ್ಲಿ ಸೆರೆಯಾಯ್ತು ಬಾಲಕಿಯ ವಿಚಿತ್ರ ವರ್ತನೆ | Viral Video

Viral Video: ಅಂಗಡಿ ಮಾಲೀಕನ ಮೇಲೆ ಏಕಾಏಕಿ ಬ್ಲೇಡ್‌ನಿಂದ ಹಲ್ಲೆಗೈದ 15 ವರ್ಷದ ಬಾಲಕಿ, ಸಣ್ಣ ವಿಷಯಕ್ಕೆ ಬ್ಲೇಡ್​ನಿಂದ ಯುವಕನ ಕೈಕೊಯ್ದು ಓಡಿ ಹೋಗಲು ಯತ್ನಿಸಿದ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಸಂಭವಿಸಿದೆ.

ಅಂಗಡಿಯಿಂದ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸಲು ಬಂದ ಬಾಲಕಿ, ತಾನು ವಾಪಾಸ್ ಕೊಟ್ಟ ವಸ್ತುಗಳನ್ನು ತೆಗೆದುಕೊಳ್ಳಲು ಮಾಲೀಕ ನಿರಾಕರಿಸಿದ ಹಿನ್ನೆಲೆ ಸಿಟ್ಟಾಗಿ, ಮತ್ತೊಬ್ಬರಿಂದ ಕ್ಯಾಶ್​ ಬಾಕ್ಸ್​ನಲ್ಲಿದ್ದ ಹಣವನ್ನು ಪಡೆದು, ಕೈಯಲ್ಲಿದ್ದ ಬ್ಲೇಡ್​ನಿಂದ ಮಾಲೀಕನ ಕೈಕೊಯ್ದು ಓಡಿ ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಮೂವರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಂಗಡಿಯಲ್ಲಿ ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಾಗ್ಗೆ ವಸ್ತುಗಳನ್ನು ಕೊಳ್ಳಲು ಅಂಗಡಿಗೆ ಬರುತ್ತಿದ್ದ ಬಾಲಕಿ, ಹೊಸ ಹೊಸ ವಸ್ತುಗಳನ್ನು ಖರೀದಿಸುತ್ತಿದ್ದಳು. ಆದರೆ, ಒಮ್ಮೆ ಅದನ್ನು ಬಳಸಿದ ನಂತರ ಇದು ಸರಿಯಿಲ್ಲ ವಾಪಾಸ್​ ಪಡೆದು, ನನಗೆ ನನ್ನ ಹಣ ನೀಡಿ ಎಂದು ಮಾಲೀಕರಿಗೆ ಹೇಳುತ್ತಿದ್ದಳು. ಇದರಿಂದ ಬೇಸತ್ತಿದ್ದ ಮಾಲೀಕ, ಈ ಬಾರಿ ಯಾವುದೇ ಕಾರಣಕ್ಕೂ ವಾಪಾಸ್ ಪಡೆಯೋದಿಲ್ಲ ಎಂದು ಹೇಳಿದ್ದಾನೆ. ಆತನ ಮಾತಿನಿಂದ ಕೆರಳಿದ ಬಾಲಕಿ, ಬ್ಲೇಡ್​ನಿಂದ ಯುವಕನ ಕೈಕೊಯ್ದು ಪರಾರಿಯಾಗಲು ಯತ್ನಿಸಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ರಕ್ತಸ್ರಾವದಿಂದ ಬಳಲುತ್ತಿದ್ದ ಮಾಲೀಕನನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು, ಕೆಲವು ದಿನಗಳಿಂದ ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಸ್ಥಳೀಯರ ಮಾತುಗಳನ್ನು ಕೇಳಿ, ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).