ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ದುಃಖವನ್ನು ಹಂಚಿಕೊಳ್ಳುವ ಪಾರ್ಟ್ನರ್ ಬೇಕೆಂದು ಬಯಸುತ್ತಾರೆ. ಪಾರ್ಟ್ನರ್ ವಿಚಾರ ಬಂದಾಗ ಕೆಲವರು ನೇರವಾಗಿ ಮದುವೆಯಾದರೆ, ಮತ್ತೆ ಕೆಲವರು ಕೇವಲ ಗೆಳತಿ-ಗೆಳೆಯರಾಗಿರುತ್ತೇವೆ ಎಂಬ ಪರಿಕಲ್ಪನೆ, ಲಿವ್-ಇನ್-ರಿಲೇಶನ್ ಶಿಪ್, ಡೇಟಿಂಗ್ ಎಂದು ಹೇಳುತ್ತಾ ಕೊನೆಗೆ ಸರಿಯಾಗಿ ಹೊಂದಾಣಿಕೆಯಾದರೆ ಮಾತ್ರ ನಾವು ಮದುವೆಯಾಗುತ್ತೇವೆ ಎನ್ನುತ್ತಾರೆ.
ಆದರೆ ಇಷ್ಟೆಲ್ಲಾ ನಡೆಯಬೇಕೆಂದರೂ ನೀವು ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಮೆಚ್ಚಿಸಬೇಕು. ಅದಕ್ಕೆ ಅವರು ಹೌದು ಎಂದು ಹೇಳಬೇಕು, ಇದು ಸುಲಭದ ಕೆಲಸವಲ್ಲ. ಒಬ್ಬ ವ್ಯಕ್ತಿಯು ತಾನು ಇಷ್ಟಪಡುವ ವ್ಯಕ್ತಿಯನ್ನು ಮೆಚ್ಚಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಈ ವಿಚಾರದಲ್ಲಿ ಕೆಲವರಿಗೆ ಅದೃಷ್ಟವಿದ್ದರೆ, ಮತ್ತೆ ಕೆಲವರಿಗೆ ಇರುವುದಿಲ್ಲ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇದೇ ರೀತಿ ಪ್ರಸಂಗ ನಡೆದಿದೆ.
ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ಯುವಕ ಹುಡುಗಿಗೆ ಪ್ರಪೋಸ್ ಮಾಡಲು ಸಂಪೂರ್ಣ ತಯಾರಿ ನಡೆಸಿರುವುದನ್ನು ನೀವು ನೋಡಬಹುದು. ಅವನು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ನೃತ್ಯ ಮಾಡುತ್ತಾ ಮೊದಲಿಗೆ ಹೂಗುಚ್ಛ ನೀಡುತ್ತಾನೆ. ನಂತರ ಪಂಜಾಬಿ ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಈ ಕ್ಷಣವನ್ನು ವಿಶೇಷವಾಗಿಸಲು ಅವರ ಸ್ನೇಹಿತರು ಸಹ ಸಹಾಯ ಮಾಡಿದ್ದಾರೆ. ಕೊನೆಗೆ ಹುಡುಗ ತನ್ನ ಹೃದಯದಲ್ಲಿರುವುದನ್ನು ಹುಡುಗಿಗೆ ಹೇಳುತ್ತಾನೆ. ಆದರೆ ಆತನಿಗೆ ಯೆಸ್ ಎಂದು ಹೇಳುವ ಬದಲು ಹುಡುಗಿ ಅಲ್ಲಿಂದ ಹೊರಟು ಹೋಗುತ್ತಾಳೆ.
ಹಿಂದಿನ ಕಾರಣವನ್ನು ಕೇಳಿದ ನೆಟ್ಟಿಗರು
ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ X (ಹಿಂದಿನ Twitter) ನಲ್ಲಿ @RVCJ_FB ಹೆಸರಿನ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವ ತನಕ ಈ ವಿಡಿಯೋವನ್ನು 4 ಲಕ್ಷ 88 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋವನ್ನು ನೋಡಿದ ನಂತರ, ಬಳಕೆದಾರರು "ಯಾರೂ ಇಂತಹ ಡ್ರಾಮಾ ಮಾಡಬಾರದು. ಇಂದಿನ ಹುಡುಗಿಯರು ಸಂಬಂಧಗಳಲ್ಲಿ ಖಾಸಗಿತನವನ್ನು ಇಷ್ಟಪಡುತ್ತಾರೆ", ಎಂದರೆ ಮತ್ತೊರ್ವ ಬಳಕೆದಾರರು "ಹುಡುಗ ತುಂಬಾ ಚುರುಕು. ಆದರೆ ಅತಿಯಾಗಿ ವರ್ತಿಸಿದ್ದಾನೆ'', "ಅತಿಯಾದ ಆತ್ಮವಿಶ್ವಾಸದಿಂದ ಹೀಗೆಲ್ಲಾ ಆಗುತ್ತದೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.