ನ್ಯೂಸ್

ಸುಪ್ರೀಂ ಕೋರ್ಟ್‌ನಲ್ಲಿ ಲಂಚ್‌ಬಾಕ್ಸ್ ಕದಿಯುತ್ತಿದ್ದ ವಾನರ; ಕಾನೂನು&ಸುವ್ಯವಸ್ಥೆ ಸಮಸ್ಯೆ ಎಂದ ನೆಟ್ಟಿಗರು | Viral Video

ನವದೆಹಲಿ: ಸುಪ್ರೀಂಕೋರ್ಟ್​​ನ ಕಾರಿಡಾರ್​​ನಲ್ಲಿ ವಿಶೇಷ ಅತಿಥಿಗಳ ಆಗಮನದಿಂದ ಭದ್ರತಾ ಉಲ್ಲಂಘನೆಯಾಗಿದೆ. ಆ ಅತಿಥಿಗಳು ಬೇರೆ ಯಾರು ಅಲ್ಲ ಕೋತಿ. ಎರಡು ಕೋತಿಗಳು ಸುಪ್ರೀಂಕೋರ್ಟ್​ ಅಂಗಳಕ್ಕೆ ಹೋಗಿದ್ದು ಮಾಡಿರುವ ಚೇಷ್ಟೆಯ ದೃಶ್ಯ ಸೆರೆಯಾಗಿದ್ದು, ಆ ವಿಡಿಯೋ(Viral Video) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೋತಿಗಳು ಸುಪ್ರೀಂ ಕೋರ್ಟ್‌ನ ಕಿಕ್ಕಿರಿದ ಕಾರಿಡಾರ್‌ಗೆ ಜಿಗಿಯುವುದನ್ನು ಕಾಣಬಹುದು. ಕೋರ್ಟಿನ ಬಾಗಿಲಿನ ಪಕ್ಕದಲ್ಲಿರುವ ಸಣ್ಣ ಕಪಾಟಿಗೆ ಒಂದು ಕೋತಿ ಹಾರಿ ಅಲ್ಲಿದ್ದ ಬ್ಯಾಗ ಅನ್ನು ತೆಗೆದುಕೊಂಡು ಜಿಗಿಯುತ್ತದೆ. ಬಳಿಕ ಬ್ಯಾಗ್​ ಅನ್ನು ತೆರೆದು ಲಂಚ್​ ಬಾಕ್ಸ್​​ ಅನ್ನು ಹಿಡಿದುಕೊಂಡಿರುವುದನ್ನು ನೋಡಬಹುದು.

ಮಂಗಗಳು ಕಳ್ಳತನ ಮಾಡುತ್ತಿರುವ ದೃಶ್ಯವನ್ನು ವಕೀಲರು ವಿಡಿಯೋ ಮಾಡಿದ್ದಾರೆ. ಊಟದ ಬಾಕ್ಸ್​ ತೆರೆಯಲು ಕೋತಿ ಹೆಣಗಾಡುತ್ತಿರುವಾಗ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿರುವ ವಕೀಲರು ನಗುವುದನ್ನು ಕೇಳಬಹುದು. ವಿಡಿಯೋ ವೈರಲ್​ ಆದ ಬಳಿಕ ಇದುವರೆಗೂ ಸುಮಾರ 50,000ಕ್ಕೂ ಹೆಚ್ಚ ಮಂದಿ ವೀಕ್ಷಿಸಿದ್ದಾರೆ. ಹಾಗೂ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ನ್ಯಾಯವನ್ನು ಪಡೆಯುವ ಅನ್ವೇಷಣೆಯಲ್ಲಿ ಸಾಮಾನ್ಯ ಜನರಿಗೆ ಸಹಾಯ ಹಸ್ತವನ್ನು ನೀಡುವುದು ಅವರ ಮಾರ್ಗವಾಗಿದೆ, ಸುಪ್ರೀಂಕೋರ್ಟ್‌ನಲ್ಲಿ ಹಗಲು ಹೊತ್ತಿನಲ್ಲಿ ಸ್ನ್ಯಾಚಿಂಗ್​, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಅಪೆಕ್ಸ್ ಕೋರ್ಟ್‌ನ ಪವಿತ್ರವಾದ ಕಾರಿಡಾರ್‌ಗಳಲ್ಲಿ ಮಂಗಗಳ ವ್ಯವಹಾರ ನಡೆಯುತ್ತಿದೆ ಎಂದು ಕಾಮಿಡಿಯಾಗಿ ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)