ನಮ್ಮ ಮುಖದ ಸೌಂದರ್ಯ ಹೆಚ್ಚಿಸುವುದು ನಗು. ನಗುವಿನ ಅಂದ ಹೆಚ್ಚಿಸುವುದು ನಮ್ಮ ದಂತಗಳು ಎಂದರೆ ತಪ್ಪಲ್ಲ. ಜನರು ತಮ್ಮ ಹಲ್ಲಿನ ಸಮಸ್ಯೆಗಳು ಅಥವಾ ನೋವಿಗೆ ಚಿಕಿತ್ಸೆ ಪಡೆಯಲು ದಂತ ವೈದ್ಯರನ್ನು ಸಂಪರ್ಕಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ಚಿನ್ನದ ಹಲ್ಲುಗಳನ್ನು ಅಳವಡಿಸಲು ವೈದ್ಯರ ಬಳಿ ಹೋಗಿದ್ದಾನೆ.
ಇದನ್ನು ಓದಿ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದವ ತಗ್ಲಾಕೊಂಡ; ಬಳಿಕ ಆ ವ್ಯಕ್ತಿ ಮಾಡಿದ ಹೈಡ್ರಾಮಾ ನೀವೇ ನೋಡಿ | Viral Video
ವೈರಲ್ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಚಿನ್ನದ ಹಲ್ಲುಗಳನ್ನು ತೋರಿಸುತ್ತಾನೆ.ಅದರ ಮೇಲೆ RAJAN ಎಂದು ಬರೆಯಲಾಗಿದೆ. ದಂತ ವೈದ್ಯರು ಚಿನ್ನದ ಹಲ್ಲುಗಳನ್ನು ವ್ಯಕ್ತಿಯ ಮುಂಭಾಗದ ಹಲ್ಲುಗಳ ನಡುವೆ ಇಡುವುದನ್ನು ಕಾಣಬಹುದು. ಎಲ್ಲಾ ಹಲ್ಲುಗಳನ್ನು ಅಳವಡಿಸಿದಾಗ ರಾಜನ್ ನಗುತ್ತಾ ಕ್ಯಾಮೆರಾವನ್ನು ನೋಡುತ್ತಾನೆ. ತನ್ನ ಚಿನ್ನದ ಹಲ್ಲುಗಳನ್ನು ತೋರಿಸುವುದನ್ನು ನೋಡಬಹುದು.
ಈಗ ಯಾರಾದರೂ ರಾಜನ್ ಅವರ ಹೆಸರನ್ನು ಕೇಳಿದಾಗಲೆಲ್ಲಾ. ಅವನು ತಕ್ಷಣ ತನ್ನ ಹಲ್ಲುಗಳನ್ನು ತೋರಿಸುತ್ತಾನೆ. ಈತ ಈಗ ತನ್ನ ಗುರುತನ್ನು ಹಲ್ಲಿನ ಮೇಲೆ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ. ಆದರೆ ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಚಿನ್ನದ ಹಲ್ಲಿನ ಮೇಲೆ ತನ್ನ ಹೆಸರನ್ನು ಕೆತ್ತಿದ ಭಾರತದ ಮೊದಲ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ಈ ವಿಡಿಯೋವನ್ನು ಇದುವರೆಗೂ 1 ಕೋಟಿ 22 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಚಾಪ್ರಿ ಪ್ರೊ ಅಲ್ಟ್ರಾ ಮ್ಯಾಕ್ಸ್, ಯಾರಾದರೂ ಹೆಸರು ಕೇಳಿದರೆ ಅದನ್ನು ನಗುತ್ತಾ ಹೇಳು, ಶಪಿಸುವ ಮೊದಲು ಅದನ್ನು ಅಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ.