ನ್ಯೂಸ್

ದ್ವಿಚಕ್ರ ವಾಹನದಲ್ಲಿ ಸ್ಪೀಡಾಗಿ ಬಂದು ಗೋಡೆಗೆ ಡಿಕ್ಕಿ ಹೊಡೆದ ಮಹಿಳೆ; ಮುಂದೇನಾಯ್ತು ನೀವೇ ನೋಡಿ.. | Viral Video

ಅತಿ ವೇಗದ ಚಾಲನೆ ಮತ್ತು ಅದರಿಂದ ಉಂಟಾಗುವ ಅಪಘಾತಗಳ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಎಷ್ಟೇ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದರೂ ಜನರು ಅದನ್ನು ನೋಡಿ ಏನು ಅರ್ಥ ಮಾಡಿಕೊಳ್ಳತ್ತಾರೆ ಎಂಬುದು ಅರ್ಥವಾಗುವುದಿಲ್ಲ. ಸದ್ಯ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ(Viral Video). ಅದರಲ್ಲಿ ಮಹಿಳೆಯೊಬ್ಬರು ದ್ಚಿಚಕ್ರವಾಹನದಿಂದ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ.

ವೈರಲ್​ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಹೆಚ್ಚಿನ ವೇಗದಲ್ಲಿ ಸ್ಕೂಟರ್‌ನಲ್ಲಿ ಬರುವುದನ್ನು ಕಾಣಬಹುದು. ಸ್ಪೀಡಾಗಿ ಬಂದವರೆ ಎದುರಲ್ಲಿದ್ದ ಗೋಡೆಗೆ ಡಿಕ್ಕಿ ಹೊಡೆಯುತ್ತಾರೆ. ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಿಳೆ ಹಾರಿಹೋಗಿ ಗೋಡೆಯ ಇನ್ನೊಂದು ಬದಿಯಲ್ಲಿ ಬೀಳುತ್ತಾರೆ. ಚಲಾಯಿಸುತ್ತಿದ್ದ ಮಹಿಳೆ ಗೋಡೆದು ಹಿಡಿದು ನಿಲ್ಲುತ್ತಾಳೆ ಬಳಿಕ ಹಿಂಬದಿ ಕುಳಿತಿದ್ದ ಮಹಿಳೆಯನ್ನು ಹುಡುಕಾಟ ನಡೆಸುವುದನ್ನು ಕಾಣಬಹುದು.

ಈ ವಿಡಿಯೋವನ್ನು ಇದುವರೆಗೂ 8 ಲಕ್ಷ 53 ಸಾವಿರ ಮಂದಿ ವೀಕ್ಷಿಸಿದ್ದಾರೆ. 8 ಸಾವಿರಕ್ಕೂ ಹೆಚ್ಚ ಮಂದಿ ಲೈಕ್​​ ಮಾಡಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ರಸ್ತೆ ಮಧ್ಯೆ ಗೋಡೆ ಕಟ್ಟಿದ್ದು ಯಾರು?, ಗೋಡೆಯನ್ನು ತಪ್ಪಾದ ಸ್ಥಳದಲ್ಲಿ ನಿರ್ಮಿಸಲಾಗಿದೆ, ಎಲ್ಲವೂ ಚೆನ್ನಾಗಿದೆ ಆದರೆ ಕ್ಯಾಮೆರಾವನ್ನು ಮುಂದೆ ಇಟ್ಟವರು ಯಾರು, ನಗುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.