ನ್ಯೂಸ್

ನಾಯಿ ನೋಡಿ ಕತ್ತೆಗೆ ತಡೆಯಲಾರದಷ್ಟು ನಗು; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ಕತ್ತೆಗೆ ಬುದ್ಧಿವಂತಿಕೆ ಇಲ್ಲ ಎಂದು ಹೇಳಲಾಗುತ್ತದೆ, ಅದಕ್ಕಾಗಿಯೇ ಕತ್ತೆಯು ಶ್ರಮಪಟ್ಟು ಬಹಳಷ್ಟು ಕೆಲಸ ಮಾಡುತ್ತದೆ. ಆದ್ದರಿಂದಲೇ ಕೆಲವು ಬಾರಿ ಕತ್ತೆ ರೀತಿ ಕೆಲಸ ಮಾಡಬೇಡಿ ಎಂದು ಹೇಳುವುದನ್ನು ಕೇಳಿರುತ್ತೇವೆ. ಇಂದಿಗೂ ಅನೇಕ ದೇಶಗಳಲ್ಲಿ ಕತ್ತೆಯನ್ನು ಭಾರ ಹೊರಲು ಬಳಸುತ್ತಾರೆ. ಆದರೆ ಕತ್ತೆ ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಕತ್ತೆಯೊಂದು ನಾಯಿಯನ್ನು ನೋಡಿ ಜೋರಾಗಿ ನಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಒಂದು ಬದಿಯಲ್ಲಿ ಮಹಿಳೆ ತನ್ನ ಎರಡು ನಾಯಿಗಳೊಂದಿಗೆ ನಿಂತಿದ್ದರೆ. ಇನ್ನೊಂದು ಬದಿಯಲ್ಲಿ ಕತ್ತೆಗಳು ಮತ್ತು ಕುದುರೆ ಇರುವುದನ್ನು ನೋಡಬಹುದು. ಇವೆರಡರ ನಡುವೆ ಕಬ್ಬಿಣದ ತಂತಿ ಬೇಲಿ ಇದ್ದು, ಅದರಲ್ಲಿ ಕರೆಂಟ್​​ ಹೋಗುತಿತ್ತು ಎಂದೆನಿಸುತ್ತದೆ. ಆದರೆ ನಾಯಿಗೆ ಇದರ ಅರಿವಿಲ್ಲದೆ ಬೇಲಿಯನ್ನು ಮುಟ್ಟತ್ತದೆ. ಕರೆಂಟ್​ ಶಾಕ್​ ಹೊಡೆದ ತಕ್ಷಣ ನಾಯಿಯು ಹೆದರಿ ಓಡಿಹೋಗುವುದನ್ನು ಕಾಣಬಹುದು. ಇದನ್ನು ನೋಡಿದ ಕತ್ತೆಯು ನಗಲು ಪ್ರಾರಂಭಿಸುತ್ತದೆ. ಅದನ್ನು ನೋಡಿದ ಮಹಿಳೆಯೂ ಜೋರಾಗಿ ನಗುತ್ತಾಳೆ.

20 ಸೆಕೆಂಡ್​​ ಇರುವ ಈ ವಿಡಿಯೋವನ್ನು ಇದುವರೆಗೂ 3.5 ಮಿಲಿಯನ್​​ ಅಂದರೆ 35 ಲಕ್ಷ ಮಂದಿ ವೀಕ್ಷಿಸಿದ್ದಾರೆ. 56 ಮಂದಿ ಲೈಕ್​ ಮಾಡಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಮೊದಲ ಬಾರಿಗೆ ಕತ್ತೆ ನಗುವುದನ್ನು ನೋಡಿದೆ, ಬಡಪಾಯಿ ನಾಯಿಗೆ ಕರೆಂಟ್​ ಶಾಕ್​ ಹೊಡೆದಿದೆ, ಕತ್ತೆ ನಾಯಿಯನ್ನು ಟ್ರೋಲ್ ಮಾಡಿದೆ ಎಂದು ಕಾಮೆಂಟ್​ ಮಾಡಿದ್ದಾರೆ.