ನ್ಯೂಸ್

OYO ರೂಮ್​​ಗಳನ್ನು ತೆರೆಸುವಂತೆ ಬಿಜೆಪಿ ಶಾಸಕರ ಕಚೇರಿ ಮುಂದೆ ವಿಭಿನ್ನವಾಗಿ ಪ್ರತಿಭಟಿಸಿದ ಪ್ರೇಮಿಗಳು; ವಿಡಿಯೋ ವೈರಲ್

ನವದೆಹಲಿ: ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ ಎಂಬ ವಾಕ್ಯವನ್ನು ನಾವು ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಪ್ರೇಮಿಗಳು ಕೈ ಕೈ ಹಿಡಿದು ರಸ್ತೆಗಳಲ್ಲಿ ಸುತ್ತಾಡುತ್ತ ಉದ್ಯಾನವನಗಳಲ್ಲಿ ಕಾಲ ಕೆಳಯುವುದನ್ನು ನಾವು ನೋಡಿದ್ದೇವೆ. ಇದೀ್ ಪ್ರೇಮಿಗಳಿಬ್ಬರು ಬಿಜೆಪಿ ಶಾಸಕರ ಕಚೇರಿ ಮುಂದೆ ರೊಮ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಛತ್ತೀಸ್​ಗಢದ ದುರ್ಗ್​​​ ಜಿಲ್ಲೆಯ ವೈಶಾಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಿಕೇಶ್​ ಸೇನ್ ಅವರ ಕಚೇರಿ ಮುಂಭಾಗ ಈ ಘಟನೆ ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿವೆ.

ವೈರಲ್​ ಆಗಿರುವ ವಿಡಿಯೋ ನೊಡುವುದಾದರೆ ಪ್ರೇಮಿಗಳಿಬ್ಬರು ಬಿಜೆಪಿ ಶಾಸಕರ ಕಚೇರಿ ಮುಂಭಾಗ ಚುಂಬಿಸುತ್ತ ನಿಂತಿರುವುದನ್ನು ನೋಡಬಹುದಾಗಿದೆ. ವೈಶಾಲಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ OYO ರೂಮ್​ಗಳನ್ನು ಶಾಸಕರು ಮುಚ್ಚಿಸಿದ್ದ ಕಾರಣ ಇದನ್ನು ಖಂಡಿಸಿ ಪ್ರೇಮಿಗಳಿಬ್ಬರು ವಿನೂತನವಾಗಿ ಪ್ರತಿಭಟಿಸುತ್ತಿದ್ದರು ಎಂದು ವರದಿಯಾಗಿದೆ.

OYO ಲಾಡ್ಜ್​ಗಳಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ರಿಕೇಶ್​ ಸೇನ್​ ಖುದ್ದು ದಾಳಿ ಮಾಡಿ ಅದನ್ನು ಮುಚ್ಚಿಸಿದ್ದರು. ಈ ಹಿಂದೆ ಪಾರ್ಕ್​ಗಳ ಮೇಲೆ ದಾಳಿ ಮಾಡಿ OYO ಇಲ್ಲದಿದ್ದರೆ ಏನಂತೆ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ ಟೈಮ್​ ಪಾಸ್​ ಮಾಡಿ ಎಂದು ಪ್ರೇಮಿಗಳಿಗೆ ಬುದ್ದಿವಾದ ಹೇಳುವ ಮೂಲಕ ಬಿಜೆಪಿ ಶಾಸಕ ರಿಕೇಶ್​ ಸುದ್ದಿಯಾಗಿದ್ದರು.