ನ್ಯೂಸ್

ರೈಲಿನಲ್ಲಿ ಟಿಕೆಟ್​ ಇಲ್ಲದೆ ಪ್ರಯಾಣಿಸಿದವ ತಗ್ಲಾಕೊಂಡ; ಬಳಿಕ ಆ ವ್ಯಕ್ತಿ ಮಾಡಿದ ಹೈಡ್ರಾಮಾ ನೀವೇ ನೋಡಿ | Viral Video

ಪಾಟ್ನಾ: ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಾನೂನು ಅಪರಾಧ. ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ. ಆದರೂ ಕೆಲವು ಮಂದಿ ರಿಸ್ಕ್ ತೆಗೆದುಕೊಂಡು ಟಿಕೆಟ್ ರಹಿತ ಪ್ರಯಾಣ ಆರಂಭಿಸುತ್ತಾರೆ. ಸಾಮಾನ್ಯ ಜನರ ವಿಶೇಷವೆಂದರೆ ಅವರು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಶಾಂತವಾಗಿರುತ್ತಾರೆ. ಆದರೆ ಮತ್ತೆ ಕೆಲವರು ಇರುತ್ತಾರೆ ವಿಚಿತ್ರವಾಗಿ ನಡೆದುಕೊಳ್ಳುವ ಮೂಲಕ ಅವರೇ ಸಿಕ್ಕಿಬೀಳುತ್ತಾರೆ. ಅಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​​(Viral Video) ಆಗಿದೆ. ಈ ವಿಡಿಯೋ ಬಿಹಾರದಿಂದ ಬಂದಿದೆ ಎನ್ನಲಾಗಿದೆ.

ವೈರಲ್​​ ವಿಡಿಯೋದಲ್ಲಿ ಟಿಟಿಇ ಬಿಹಾರದ ಸಮಸ್ತಿಪುರ ಮೂಲಕ ಹೋಗುತ್ತಿದ್ದ ರೈಲಿನೊಳಗೆ ಟಿಕೆಟ್ ರಹಿತ ಪ್ರಯಾಣಿಕನನ್ನು ಹಿಡಿದಿದ್ದಾರೆ. ಅಸಲಿಗೆ ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಟಿಟಿಇ ನೋಡಿದ ಕೂಡಲೇ ಸೀಟು ಕೇಳಲು ಶುರು ಮಾಡುತ್ತಾರೆ. ಆತನ ಅತಿಯುತ್ಸಾಹದ ನಡವಳಿಕೆ ಕಂಡು ಟಿಟಿಇ ಟಿಕೆಟ್​​ ತೋರಿಸುವಂತೆ ಕೇಳುತ್ತಾರೆ. ಬಳಿಕ ಆತ ತನ್ನ ಬಳಿ ಟಿಕೆಟ್​ ಇಲ್ಲ ಎಂದು ಹೇಳುತ್ತಾನೆ. ಟಿಟಿಇ ರಿಸರ್ವ್​​​ ಇರುವವರಿಗಿರುವ ಸ್ಥಳ ಇದು ಮುಂದೆ ಹೋಗಿ ನೀವು ಎಂದು ಹೇಳುತ್ತಾರೆ.

ಅದಕ್ಕೆ ಆ ವ್ಯಕ್ತಿ ತಾನು ನಾನು ಡಿಆರ್​ಎಂ ಸೋದರಳಿಯ ಎಂದು ಜೋರು ಧ್ವನಿಯಲ್ಲಿ ಟಿಟಿಇಗೆ ಧಮ್ಕಿ ಹಾಕುವ ರೀತಿ ಮಾತನಾಡುತ್ತಾನೆ. ಟಿಟಿಇ ಕರೆ ಮಾಡಿ ಕೊಡಿ ನಾನು ಮಾತಾಡುತ್ತೇನೆ ಎಂದು ಕೇಳುತ್ತಾರೆ. ಆಗ ಆ ವ್ಯಕ್ತಿ ಟಿಟಿಇಗೆ ನಾವು ಬಕ್ಸರ್‌ಗೆ ಹೋಗುತ್ತೇವೆ, ನಿಮ್ಮ ದಂಡ ಎಷ್ಟು ಹೇಳಿ ಎಂದು ಹೇಳುತ್ತಾನೆ. ಇದನ್ನು ಕೇಳಿ ಟಿಟಿಇ ಇನ್ನಷ್ಟು ಕೋಪಗೊಂಡು ಮುಂದೆ ಹೋಗುವಂತೆ ಹೇಳುತ್ತಾರೆ.

ಈ 40 ಸೆಕೆಂಡ್​ಗಳ ವಿಡಿಯೋವನ್ನು ವೀಕ್ಷಿಸಿರುವವರು ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿಗೆ ಅದ್ಭುತವಾದ ಆತ್ಮವಿಶ್ವಾಸವಿದೆ, ಒಬ್ಬರು ಟಿಕೆಟ್​ ಇಲ್ಲದೆ ಹೇಗೆ ಸೆಕೆಂಡ್ ಎಸಿಯಲ್ಲಿ ಪ್ರಯಾಣಿಸುತ್ತಾರೆ, ಟಿಕೆಟ್​ ಇಲ್ಲದೆ ಪ್ರಯಾಣ ಮಾಡುವಾಗ ಇಷ್ಟೆಲ್ಲಾ ಚರ್ಚೆ ಮಾಡುತ್ತಾರೆಯೇ, ಈತ DRM ಸೋದರಳಿಯನಂತೆ ಹೇಗೆ ಕಾಣುತ್ತಾನೆ ಎಂದು ಕಾಮೆಂಟ್​ ಮಾಡಿದ್ದಾರೆ.