ಭೋಪಾಲ್: ಕುಡಿದು ಮತ್ತೆರಿಸಿಕೊಳ್ಳುವವರು ತಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಎಂದು ಹೇಳುತ್ತಾರೆ. ಹೌದು ಅದು ನಿಜ ಎನ್ನುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ 80 ಅಡಿ ಎತ್ತರದ ಮೊಬೈಲ್ ಟವರ್ ಏರುವುದು ಎಂದರೆ ಅದು ಸಾಮಾನ್ಯ ಸಂಗತಿಯಲ್ಲ.
ಇದನ್ನು ಓದಿ: ವಾಷಿಂಗ್ ಮೆಷಿನ್ನಲ್ಲಿ ಗೋಧಿ ಒಣಗಿಸಿದ ವ್ಯಕ್ತಿ ಜುಗಾಡ್ ಟ್ರಿಕ್; Viral Video ನೋಡಿ ನೆಟ್ಟಿಗರು ಶಾಕ್
ಏಕೆಂದರೆ ಯಾವುದೇ ಸಾಮಾನ್ಯ ವ್ಯಕ್ತಿ ಸುರಕ್ಷತೆ ಮತ್ತು ಅವಶ್ಯಕತೆಯಿಲ್ಲದೆ ಅಷ್ಟು ಎತ್ತರಕ್ಕೆ ಏರುವುದಿಲ್ಲ. ಆದರೆ ಮಧ್ಯಪ್ರದೇಶದ ಭೋಪಾಲ್‌ನ ಬರ್ಖೇಡಿ ಪ್ರದೇಶದಲ್ಲಿ 33 ವರ್ಷದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ 80 ಅಡಿ ಎತ್ತರದ ಟವರ್ ಏರಿದ್ದಾನೆ. ಇದಾದ ನಂತರ ಅವನನ್ನು ನೋಡಲು ಜನರ ಗುಂಪು ಅಲ್ಲಿ ಸೇರಲು ಪ್ರಾರಂಭಿಸಿದಾಗ ಅವನು ಗೋಪುರದ ಮೇಲೆಯೇ ಡ್ಯಾನ್ಸ್ ಮಾಡಲು ಪ್ರಾರಂಭಿಸುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.
ಆತನನ್ನು ನೋಡಿದ ಜನರು ಅವನನ್ನು ಕೆಳಗೆ ಬರಲು ವಿನಂತಿಸಲು ಪ್ರಾರಂಭಿಸುತ್ತಾರೆ. ಅವನು ಗೋಪುರದ ಟವರ್ ಮೇಲೆ ನಿಂತು ವಿಚಿತ್ರವಾದ ನೃತ್ಯವನ್ನು ಮಾಡಲು ಪ್ರಾರಂಭಿಸುತ್ತಾನೆ. ಈ ವೇಳೆ ಜನರು ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆತ ಡ್ಯಾನ್ಸ್ ಮಾಡುವ ವಿಡಿಯೋ ಸುಮಾರು 13 ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತದೆ.
ಜಹಾಂಗೀರಾಬಾದ್ ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅದರ ನಂತರ ಅಗ್ನಿಶಾಮಕ ಕ್ರೇನ್ ಅನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಆದರೆ ಅಧಿಕಾರಿಗಳು ಕೆಳಗಿನಿಂದ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಸುಮಾರು 20 ನಿಮಿಷಗಳ ಕಾಲ ಮನವೊಲಿಸಿದ ನಂತರ ಅವರೇ ಕೆಳಗಿಳಿದು ಬಂದಿದ್ದರಿಂದ ಅಲ್ಲಿದ್ದವರು ನಿರಾಳರಾದರು ಎಂದು ವರಿದಯಾಗಿದೆ.(ಏಜೆನ್ಸೀಸ್)