ನ್ಯೂಸ್

ಜಡೆ ಜಗಳದ ನಡುವೆ ಹುಡುಗ ವೈಲೆಂಟ್​​; ಆತನ ವರ್ತನೆಗೆ ನೆಟ್ಟಿಗರು ಹೇಳಿದ್ದು ಹೀಗೆ | Viral Video

ಶಾಲಾ ಅಥವಾ ಕಾಲೇಜು ಯಾವುದ ಸಮಯದಲ್ಲಾದರೂ ತರಗತಿಗಳಲ್ಲಿ ಆಗುವ ಕೆಲವೊಂದು ಸನ್ನಿವೇಶಗಳನ್ನು ಮರೆಯಲಾಗುವುದಿಲ್ಲ. ಪ್ರತಿಯೊಬ್ಬರು ವಿದ್ಯಾರ್ಥಿ ಜೀವನದಲ್ಲಿ ಹಲವು ನೆನಪುಗಳನ್ನು ಹೊಂದಿರುತ್ತಾರೆ. ಆ ಘಟನೆಗಳು ಒಳ್ಳೆಯದಿರಲಿ ಅಥವಾ ಕೆಟ್ಟದ್ದಾಗಿರಲಿ ನೆನಪಿನಲ್ಲಿ ಉಳಿಯುತ್ತವೆ. ಆದರೆ ಕ್ಲಾಸ್ ಮೇಟ್‌ಗಳು ಸೇರಿದಂತೆ ಎಲ್ಲರೂ ಖುಷಿಯಿಂದ ನೋಡುವ ಜಗಳಗಳ ಕ್ಷಣಗಳಿವೆ. ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(VIral Video). ಇಬ್ಬರು ಹುಡುಗಿಯರು ಜಗಳ ಆಡುತ್ತಿದ್ದರೆ ಹುಡುಗ ಪ್ರತಿಕ್ರಿಯಸಿರುವ ರೀತಿ ಎಲ್ಲರ ಗಮನ ಸೆಳೆದಿದೆ.

ವೈರಲ್​ ವಿಡಿಯೋದಲ್ಲಿ, ಕೋಚಿಂಗ್ ಸೆಂಟರ್‌ನಂತೆ ಕಾಣುವ ಕ್ಲಾಸ್​​ನಲ್ಲಿ ವಿದ್ಯಾರ್ಥಿಗಳು ಕುಳಿತಿದ್ದಾರೆ. ಮೇಜಿನ ಮೇಲೆ ಕುಳಿತಿರುವ ಒಂದು ಹುಡುಗಿಯನ್ನು ಮತ್ತೊಂದು ಹುಡುಗಿ ಬಂದು ಏನೋ ಪ್ರಶ್ನಿಸುವುದನ್ನು ನಾವು ಕಾಣಬಹುದು. ಇಬ್ಬರ ಮಾತು ಜಗಳದ ರೂಪವನ್ನು ಪಡೆಯುತ್ತದೆ. ಮೇಜಿನಲ್ಲಿ ಹುಡುಗಿ ಪಕ್ಕದಲ್ಲೇ ಕುಳಿತಿರುವ ಹುಡುಗ ಜಗಳ ನೋಡುತ್ತಾ ಹಿಂದೆ ಸರಿಯುತ್ತಾನೆ.

ಬಳಿಕ ಕೋಪಗೊಂಡು ಸೀಟಿನಿಂದ ಎದ್ದು ಬ್ಯಾಗನ್ನು ಎಸೆಯುವುದನ್ನು ಕಾಣಬಹುದು. ಅದರ ನಂತರ ಯಾರೂ ನಿರೀಕ್ಷಿಸಲಾಗದಂತೆ ಕೋಪದಲ್ಲಿ ಹುಡುಗ ಇದ್ದಕ್ಕಿದ್ದಂತೆ ಆ ಮೇಜಿನ ಮೇಲೆ ಎರಡು ಬಾರಿ ಬಡಿದು ಬ್ಯಾಗ ಎಸೆದು ಎದ್ದು ಬರುತ್ತಾನೆ. ಮತ್ತೆ ಮೇಜನ್ನು ಬಡಿಯುತ್ತಾನೆ. ಅವರ ವರ್ತನೆ ನೋಡಿ ಜಗಳವಾಡುತ್ತಿದ್ದ ಹುಡುಗಿಯುರ ಮೌನವಾಗುತ್ತಾರೆ. ಮೇಜನ್ನು ಬಡಿಯುವ ಹುಡುಗನನ್ನು ಮತ್ತೊಬ್ಬ ವಿದ್ಯಾರ್ಥಿ ಹಿಡಿದುಕೊಂಡು ನಿಯಂತ್ರಣಕ್ಕೆ ತರುತ್ತಾನೆ. ಅಲ್ಲದೆ ಆ ಹುಡುಗ ಮೇಜನ್ನು ಬಡಿಯುವಾಗ ಇಡೀ ತರಗತಿಯೆ ಬೆಚ್ಚಿಬಿದ್ದು ಅವನನ್ನು ನೋಡುವುದನ್ನು ಕಾಣಬಹುದು.

ಸುಮಾರು 12 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​​​ ಅನ್ನು ಈವರೆಗೂ 2.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಹುಡುಗಿಯರು ಜಗಳವಾಡುವವರೆಗೂ ಚೆನ್ನಾಗಿತ್ತು, ಈ ಸಹೋದರನ ಬಿಪಿ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಯಿತು?, ಹುಡುಗರು ಹುಡುಗಿಯರೊಂದಿಗೆ ಜಗಳವಾಡುವುದರಲ್ಲಿ ವಿಭಿನ್ನ ಆನಂದವನ್ನು ಪಡೆಯುತ್ತಾರೆ, ಸಹೋದರನು ತನ್ನನ್ನು ಇನ್ನೊಬ್ಬ ಕಬೀರ್ ಸಿಂಗ್ ಎಂದು ಪರಿಗಣಿಸುತ್ತಿದ್ದಾನೆ, ಹುಡುಗಿಯರು ತಮ್ಮ ತಮ್ಮೊಳಗೆ ಜಗಳವಾಡುವುದನ್ನು ನೋಡುವುದು ತಮಾಷೆಯಾಗಿದೆ, ಇಡೀ ಜಗತ್ತು ಕೆಟ್ಟ ಸ್ಥಿತಿಯಲ್ಲಿದೆ ಎಲ್ಲರೂ ಕೋಪದಿಂದ ಇದ್ದಾರೆ ಯಾರಿಗೂ ತಾಳ್ಮೆ ಇಲ್ಲ, ಎಲ್ಲವೂ ದೇವರ ಮೇಲೆ ಅವಲಂಬಿತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.