ನ್ಯೂಸ್

ತಂದೆ ಇಮ್ರಾನ್​ ಹಶ್ಮಿ & ತಾಯಿ ಸನ್ನಿ ಲಿಯೋನ್..; ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​ನಲ್ಲಿ ಉಲ್ಲೇಖ! | Viral Post

ಪಾಟ್ನಾ: ವಿಶೇಷ ಮತ್ತು ವಿಚಿತ್ರ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಎಲ್ಲರ ಗಮನ ಸೆಳೆಯುತ್ತದೆ. ಇಂತಹ ಸಂಗತಿಗಳು ನಗುವುದಕ್ಕೆ ಕಾರಣವಾದರೆ ಕೆಲವೊಮ್ಮೆ ಆಲೋಚಿಸುವಂತೆ ಮಾಡುತ್ತದೆ. ಸದ್ಯ ಜಾಲತಾಣದಲ್ಲಿ ಇಂತಹುದೇ ಪ್ರಕರಣವೊಂದು ವೈರಲ್​ ಆಗುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷಾ ನಮೂನೆಯಲ್ಲಿ ಸಿನಿಮಾ ಸೆಲಿಬ್ರಿಟಿಗಳನ್ನು ತಮ್ಮ ತಂದೆ ಮತ್ತು ತಾಯಿ ಎಂದು ಉಲ್ಲೇಖಿಸಿದ್ದಾನೆ.

ವೈರಲ್​ ಪೋಸ್ಟ್​​​ನಲ್ಲಿ ಬಿಹಾರದ ವಿದ್ಯಾರ್ಥಿಯೊಬ್ಬನ ಪರೀಕ್ಷಾ ನಮೂನೆ ಕಾಣಿಸಿಕೊಂಡಿದೆ. ಈ ಫಾರ್ಮ್ 2020ರದ್ದು ಎಂದು ಹೇಳಲಾಗುತ್ತಿದ್ದು, ಈಗ ಮತ್ತೊಮ್ಮೆ ಅದು ವೈರಲ್ ಆಗಿದೆ. ಇದು ವಿದ್ಯಾರ್ಥಿಯೊಬ್ಬ ಪದವಿಗಾಗಿ ತನ್ನ ಪರೀಕ್ಷಾ ಅರ್ಜಿಯನ್ನು ಭರ್ತಿ ಮಾಡಿದ ಪ್ರಕರಣವಾಗಿದೆ. ಈ ಫಾರ್ಮ್‌ನಲ್ಲಿರುವ ವಿದ್ಯಾರ್ಥಿಯ ಹೆಸರು ಕುಂದನ್, ಆದರೆ ಅದರಲ್ಲಿ ನೀಡಲಾದ ವಿವರಗಳು ಸಾಕಷ್ಟು ತಮಾಷೆಯಾಗಿದೆ. ಮತ್ತು ಇದು ನಿಜವೇ ಎಂಬ ಅನುಮಾನವು ಮೂಡುತ್ತದೆ. ಏಕೆಂದರೆ ಅದರಲ್ಲಿ ಉಲ್ಲೇಖಿಸಿರುವ ವೈಯಕ್ತಿಕ ವಿವರಗಳು ಸತ್ಯಕ್ಕೆ ದೂರವಾಗಿದೆ.

ಫಾರ್ಮ್​​ನಲ್ಲಿ ತಂದೆಯ ಹೆಸರನ್ನು ಇಮ್ರಾನ್​ ಹಶ್ಮಿ ಮತ್ತು ತಾಯಿಯ ಹೆಸರನ್ನು ಸನ್ನಿ ಲಿಯೋನ್ ಎಂದು ಬರೆದಿದ್ದಾನೆ. ವಿದ್ಯಾರ್ಥಿಯು ಜಾತಿಯ ಜಾಗದಲ್ಲಿ ‘ಬಿಸಿ’ (ಹಿಂದುಳಿದ ವರ್ಗ) ಎಂದು ಬರೆದಿದ್ದರೆ, ಧರ್ಮದ ಸ್ಥಳದಲ್ಲಿ ‘ಹಿಂದೂ’ ಎಂದು ಬರೆಯಲಾಗಿದೆ. ಇದು ಕುತೂಹಲಕಾರಿಯಾಗಿದೆ ಏಕೆಂದರೆ ತಂದೆಯ ಹೆಸರು ಮುಸ್ಲಿಂ, ಆದರೂ ವಿದ್ಯಾರ್ಥಿ ತನ್ನ ಧರ್ಮವನ್ನು ಹಿಂದೂ ಎಂದು ಹೇಳಿದ್ದಾನೆ. ಇದಲ್ಲದೆ ವಿಳಾಸದ ಸ್ಥಳದಲ್ಲಿ ವಿದ್ಯಾರ್ಥಿಯು "ರೆಡ್ ಲೈಟ್ ಏರಿಯಾ" ಎಂಬ ಹೆಸರನ್ನು ಬರೆದಿರುವುದನ್ನು ವೈರಲ್​ ಪೋಸ್ಟ್​ನಲ್ಲಿ ನೋಡಬಹುದಾಗಿದೆ.

ಪೋಸ್ಟ್​​​ ವೈರಲ್​ ಆಗುತ್ತಿದ್ದಂತೆ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು, ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಬಿಹಾರದಲ್ಲಿ ಏನು ಬೇಕಾದರೂ ಆಗಬಹುದು, ಅಸಾಧ್ಯವಾದದ್ದು ಯಾವುದೂ ಇಲ್ಲ, ಶಿಕ್ಷಣ ಮರೆತು ಈ ವ್ಯಕ್ತಿ ಸ್ಕ್ರಿಪ್ಟ್ ಬರೆಯಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)