ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸಿ ಪರಾರಿಯಾಗುತ್ತಿದ್ದ ಕಾರನ್ನು ಹಿಡಿಯಲು ಕಾರಿನ ಬಾನೆಟ್ ಮೇಲೆ ಹತ್ತಿದ್ದ ಪೊಲೀಸ್ ಅಧಿಕಾರಿಯನ್ನು ಚಾಲಕ ಸುಮಾರು 2 ಕಿ.ಮೀ.ವರೆಗೆ ಎಳೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಮತ್ತು ಇದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಈ ಘಟನೆ ಎರಡು ತಿಂಗಳು ಹಳೆಯದ್ದು ಎಂದೂ ಹೇಳಲಾಗುತ್ತಿದೆ. ದೆಹಲಿಯ ನಂಗ್ಲೊಯಿ ಚೌಕ್ ಬಳಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಿಷೇಧವಿದ್ದ ಮಾರ್ಗದಿಂದ ಬಂದ ಕಾರನ್ನು ಸುನೀಲ್ ಎಂಬ ಅಧಿಕಾರಿ ತಡೆಯಲು ಮುಂದಾದರು. ಆದರೆ, ಚಾಲಕ ಕಾರು ನಿಲ್ಲಿಸಲಿಲ್ಲ. ಆಗ ಸುನೀಲ್ ಕಾರಿನ ಬಾನೆಟ್ ಮೇಲೆ ಎಗರಿ ಕುಳಿತರು. ಆದರೂ ಕಾರನ್ನು ನಿಲ್ಲಿಸದ ಚಾಲಕ, ಸುಮಾರು 2 ಕಿ.ಮೀ. ದೂರ ಅವರನ್ನು ಅದೇ ಸ್ಥಿತಿಯಲ್ಲಿ ಕರೆದೊಯ್ದಿದ್ದ. ಬಳಿಕ ಅವರನ್ನು ಕೆಳಗಿಳಿಸಿ ಪರಾರಿಯಾಗಿದ್ದಾನೆ. ಇದರಿಂದ ಸುನೀಲ್ಗೆ ಗಾಯವಾಗಿದೆ. ಚಾಲಕನ ಪಕ್ಕದಲ್ಲಿ ಕೂತಿದ್ದ ವ್ಯಕ್ತಿ ಈ ಘಟನೆಯನ್ನು ವಿಡಿಯೋ ಮಾಡಿದ್ದ.