ನ್ಯೂಸ್

ಮಹಿಳೆಯನ್ನು ಸಂತೈಸಿದ ಮಿಕ್ಕಿ ಮೌಸ್

ಮೂರು ದಶಕಗಳ ಹಿಂದಿನವರಿಗೆ ಮಿಕ್ಕಿ ಮೌಸ್ ಹಾಗೂ ಮಿನ್ನಿ ಮೌಸ್ ಪಾತ್ರಗಳು ಚಿರಪರಿಚಿತ. ಬಹಳ ಮೃದು ಮಾತಿನವಳು ಎನಿಸಿದ ಮಿನ್ನಿ ಮೌಸ್ ಎಲ್ಲರಿಗೂ ಅಚ್ಚುಮೆಚ್ಚು.

ಆದರೆ ಇತ್ತೀಚೆಗೆ ಮಿನ್ನಿ ಮೌಸ್ ಪಾತ್ರಧಾರಿ ಮಹಿಳೆಯೊಬ್ಬಳು ಲಾಸ್​ವೆಗಾಸ್​ನಲ್ಲಿ ಭದ್ರತಾ ಸಿಬ್ಬಂದಿಯ ಬಗ್ಗೆ ಕೋಪ ಮಾಡಿಕೊಂಡು ಅವರೊಡನೆ ಜಗಳಕ್ಕೆ ಮುಂದಾಗಿದ್ದಳು. ಕೊನೆಗೆ ಪಕ್ಕದಲ್ಲೇ ಇದ್ದ ಮಿಕ್ಕಿ ಮೌಸ್ ಹಾಗೂ ಗೂಫಿ ಪಾತ್ರಧಾರಿಗಳು ಆಗಮಿಸಿ ಈ ಮಿನ್ನಿ ಮೌಸ್ ಪಾತ್ರಧಾರಿ ಮಹಿಳೆಯನ್ನು ಸಂತೈಸಬೇಕಾಯಿತು. ಇದರ ವಿಡಿಯೋ ವೈರಲ್ ಆಗಿದೆ.