ನ್ಯೂಸ್

ಹಿರಿಯಣ್ಣನ ವಿಶಿಷ್ಟ ವಾತ್ಸಲ್ಯ

malli

‘ಹುಟ್ಟುತ್ತ ಅಣ್ಣತಮ್ಮಂದಿರು, ಬೆಳೆಯುತ್ತ ದಾಯಾದಿಗಳು’ ಎಂಬ ಗಾದೆಮಾತನ್ನು ಕೇಳಿಯೇ ಇರುತ್ತೇವೆ. ಅಷ್ಟಲ್ಲದೆ ದಿನದಿನವೂ ನಾನಾ ಬಗೆಯ ದಾಯಾದಿ ಕಲಹಗಳ ಬಗ್ಗೆ ಮಾಧ್ಯಮಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಆದರೆ ಅಮೆರಿಕದ ಲೂಸಿಯಾನಾದ ಈ ಸಹೋದರನ ವಾತ್ಸಲ್ಯ ಗಮನ ಸೆಳೆಯುವಂತಿದೆ.

ಇಲ್ಲಿನ ನೋಹ್ ಎಂಬ ಯುವಕ ತನ್ನ ಮುದ್ದಿನ ತಮ್ಮ ಮ್ಯಾಕ್ಸ್ ಎಂಬಾತನನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆತರಲು ಶಾಲಾ ಬಸ್ ಬಳಿ ಹೋಗುತ್ತಿದ್ದ. ಆತನನ್ನು ಬರಮಾಡಿಕೊಳ್ಳಲೆಂದು ನಾನಾ ರೀತಿಯ ವೇಷಗಳನ್ನು ಕೂಡ ಧರಿಸುತ್ತಿದ್ದ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.