ನ್ಯೂಸ್

ಆಫೀಸರ್​ ಸೋಗಿನಲ್ಲಿ ನಿಜವಾದ ಪೊಲೀಸರಿಗೆ ನಾಮ ಹಾಕಲು ಮುಂದಾದ ಸೈಬರ್​ ಖದೀಮ; ಮುಂದೇನಾಯ್ತು ನೀವೇ ನೋಡಿ

ತ್ರಿಶೂರ್​: ಇತ್ತೀಚಿನ ದಿನಗಳಲ್ಲಿ ಸೈಬರ್​ ಖದೀಮರ ಹಾವಳಿ ಹೆಚ್ಚಾಗಿದ್ದು, ಸರ್ಕಾರಗಳು ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸದು ಸೈಬರ್​ ಕಳ್ಳರು ಮಾತ್ರ ಅಮಾಯಕರನ್ನು ವಂಚಿಸುತ್ತಲೇ ಬರುತ್ತಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದರಲ್ಲಿ ಸೈಬರ್​ ಖದೀಮನೊಬ್ಬ ಪೊಲೀಸ್​ ಅಧಿಕಾರಿಗೆ ಕರೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಪೊಲೀಸ್​ ಅಧಿಕಾರಿಯ ವೇಷದಲ್ಲಿರುವ ಸೈಬರ್​ ಖದೀಮನೋರ್ವ ನಿಜವಾದ ಆಫೀಸರ್​ ಜೊತೆಗೆ ವಿಡಿಯೋ ಕಾಲ್​​ ಮುಖಾಂತರ ಮಾತುಕತೆ ನಡೆಸಿದ್ದು, ಬಳಿಕ ನಿಜವಾದ ಅಧಿಕಾರಿ ಕ್ಯಾಮರಾ ಆನ್​ ಮಾಡಿದಾಗ ಸೈಬರ್​ ಖದೀಮ ಒಂದು ಕ್ಷಣ ಶಾಕ್​ ಆಗಿದ್ದು, ಅಧಿಕಾರಿ ಕಾಲ್​ ರೆಕಾರ್ಡ್​ ಹಾಗೂ ಡೀಟೇಲ್ಸ್​ ಎಲ್ಲಾ ತೆಗೆಸಿರುವುದಾಗಿ ಹೇಳಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಇತ್ತ ಪೊಲೀಸ್​ ಅಧಿಕಾರಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಪೊಲೀಸ್​ ಅಧಿಕಾರಿಯನ್ನು ಹಾಡಿಹೊಗಳುತ್ತಿದ್ದಾರೆ. ಹಲವರು ಈ ವಿಡಿಯೋವನ್ನು ಪೋಸ್ಟ್​ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದು, ಪೊಲೀಸರು ವಿಡಿಯೋ ಕಾಲ್​ಗೆ ಸಂಬಂಧಿಸಿದಂತೆ ಕ್ರಮ ಜರುಗಿಸಿದರಾ ಇಲ್ಲವಾ ಎಂಬುದು ಈವರೆಗೆ ತಿಳಿದು ಬಂದಿಲ್ಲ.