ನ್ಯೂಸ್

ಮಹಾ ನ್ಯೂಸ್​ ಸುದ್ದಿವಾಹಿನಿ ಕಚೇರಿ ಮೇಲೆ ಹಿಂಸಾತ್ಮಕ ದಾಳಿ; ಸಿಎಂ ರೇವಂತ್​ರೆಡ್ಡಿ ಆಕ್ರೋಶ| mahaa-news

ಇನ್ನೂ ಈ ಘಟನೆಯ ದೃಶ್ಯಾವಳಿಗಳನ್ನು ಮೊಬೈಲ್, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದಾಳಿಕೋರರ ಕೃತ್ಯವನ್ನು ಹಲವರು ಖಂಡಿಸಿದ್ದಾರೆ.

ಹೈದರಾಬಾದ್‌: ಇಂದು(28) ಹೈದರಾಬಾದ್‌ನಲ್ಲಿರುವ ಮಹಾ ನ್ಯೂಸ್ ಕಚೇರಿಯ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಖಂಡಿಸಿ ಹೈದರಾಬಾದ್‌ ಸಿಎಂ ರೇವಂತ್​ರೆಡ್ಡಿ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೆ ಮಹಾ ನ್ಯೂಸ್ ಟಿವಿಯಲ್ಲಿ ಬಿಆರ್‌ಎಸ್ ಪಕ್ಷದ ನಾಯಕ ಕೆ.ಟಿ.ಆರ್ ಅವರ ಬಗ್ಗೆ ಸರಣಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಬಿಆರ್‌ಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಮಹಾ ನ್ಯೂಸ್ ಸುದ್ದಿವಾಹಿನಿ ಎಕ್ಸ್‌ನಲ್ಲಿ ಗಂಭೀರ ಆರೋಪ ಮಾಡಿದೆ.

ದಾಳಿಯ ವೇಳೆ ಹತ್ತಾರು ಜನ ಕಚೇರಿ ಒಳ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಬಾಗಿಲು ಹಾಕಿ ಸಂಭವನೀಯ ಹೆಚ್ಚಿನ ಅಪಾಯವನ್ನು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ದಾಳಿಕೋರರು ಕಚೇರಿಯ ಕಿಟಕಿ-ಬಾಗಿಲು ಹಾಗೂ ಕಚೇರಿ ಮುಂದೆ ನಿಂತಿದ್ದ ಕಾರುಗಳನ್ನು ಪುಡಿಗಟ್ಟಿದ್ದಾರೆ.

(ಏಜೆನ್ಸೀಸ್)

ತೆಲುಗು ಹಿರಿಯ ಪತ್ರಕರ್ತ ಇನಾಗಂಟಿ ವೆಂಕಟರಾವ್ ಅವರು ಮಹಾ ನ್ಯೂಸ್ ಸುದ್ದಿ ವಾಹಿನಿಯನ್ನು ಮುನ್ನಡೆಸುತ್ತಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೂ ಈ ಘಟನೆಯನ್ನು ಬಿಜೆಪಿ, ಟಿಡಿಪಿ, ಜನಸೇನಾ ಹಾಗೂ ಕಾಂಗ್ರೆಸ್ ನಾಯಕರು ಮತ್ತು ಹಲವು ಪತ್ರಕರ್ತರು ದಾಳಿಯನ್ನು ಖಂಡಿಸಿದ್ದಾರೆ.