ನ್ಯೂಸ್

ಇನ್‌ಸ್ಟಾಗ್ರಾಮ್‌ನಲ್ಲಿ ವಿಂಟೇಜ್ ಸೀರೆ AI ಟ್ರೆಂಡ್; ರೆಟ್ರೋ ಲುಕ್​ ಫೋಟೋಗಳನ್ನು ತಯಾರಿಸುವುದೇಗೆ? Viral news

ಸುದೀಪ್​ ವಿ.ಎನ್​

Viral news; ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ, ಅದರಲ್ಲೂ ಬಹಳ ಮುಖ್ಯವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಎಲ್ಲರೂ ಕೂಡ ತಮ್ಮ-ತಮ್ಮ ಮೊಬೈಲ್​ಗಳಲ್ಲಿ ಜೆಮಿನಿ ನ್ಯಾನೋ ಹಾಗೂ ಎಐ ಸಹಾಯದ ಮೂಲಕ ವಿಂಟೇಜ್ ಸೀರೆ ಫೋಟೋ ಎಡಿಟ್​ ಮಾಡಲು ಶುರು ಮಾಡಿದ್ದಾರೆ. 90ರ ದಶಕದ ಹಳೆಯ ಕನ್ನಡ ಚಲನಚಿತ್ರಗಳ ಪೋಸ್ಟರ್​ಗಳಂತೆ ಈ ಫೋಟೋಗಳು ಕಾಣಿಸುತ್ತವೆ. ಈ ಅಪ್ಲಿಕೇಷನ್​ನಲ್ಲಿ ನಿಮ್ಮ ಫೋಟೋಗಳನ್ನು ಶಿಫಾನ್ ಸೀರೆ, ಕಪ್ಪು ಪಾರ್ಟಿವೇರ್ ಸೀರೆ ಹಾಗೂ ಹಳೆ ಸಿನಿಮಾಹ ಶೈಲಿಯಲ್ಲಿ ಬದಲಾಯಿಸಬಹುದಾಗಿದೆ. ಹಾಗಿದ್ರೆ ಇದನ್ನು ನಾವು ಕೂಡ ಟ್ರೈ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಜೆಮಿನಿ ನ್ಯಾನೋ ಎಂದರೇನು?

ಇದು ಏಕವ್ಯಕ್ತಿ ಫೋಟೋಗಳನ್ನು AI ಸಹಾಯದಿಂದ ರೆಟ್ರೊ ಶೈಲಿಯ ಪೋಸ್ಟರ್‌ಗಳಾಗಿ ಪರಿವರ್ತಿಸುತ್ತದೆ. ಸಂಪಾದನೆಗಳು ನಾಟಕೀಯ ನೆರಳುಗಳು, ಕಪ್ಪು-ಬಿಳುಪಿನ ಶೇಡ್‌ಗಳು ಮತ್ತು ಕ್ಲಾಸಿಕ್ ಬಾಲಿವುಡ್ ಸೌಂದರ್ಯವನ್ನು ಅನುಕರಿಸಲು ಪ್ರಯತ್ನಿಸುತ್ತವೆ. ಗೂಗಲ್‌ನ ಜೆಮಿನಿ (Gemini) ಹಾಗೂ ಚಾಟ್‌ಜಿಪಿಟಿ (ChatGPT) ಯಂತಹ AI ಅಪ್ಲಿಕೇಷನ್​ಗಳಲ್ಲಿ ಈ ಟ್ರೆಂಡ್​ಅನ್ನು ಸೃಷ್ಟಿಸಬಹುದಾಗಿದೆ.

ಫೋಟೋ ಎಡಿಟ್​ ಮಾಡುವುದೇಗೆ.?

(ಏಜೆನ್ಸೀಸ್)

ಸೀರೆ ಎಡಿಟ್ ಟ್ರೆಂಡ್ ಎಲ್ಲರಿಗೂ ಮುಕ್ತವಾಗಿದೆ. AI ಇಮೇಜ್ ಜನರೇಟರ್ ಪ್ರವೇಶದೊಂದಿಗೆ, ಯಾರಾದರೂ ಟೈಮ್‌ಲೆಸ್ ವಿಂಟೇಜ್ ಲುಕ್ ಅನ್ನು ಮರುಸೃಷ್ಟಿಸಬಹುದು.

ಕೆಲವೇ ಸೆಕೆಂಡುಗಳಲ್ಲಿ, ನಿಮ್ಮ ರೆಟ್ರೋ ಬಾಲಿವುಡ್ ಶೈಲಿಯ ಚಿತ್ರವು ಇನ್​ಸ್ಟಾಗ್ರಾಮ್​ನಲ್ಲಿ ಉಳಿಸಲು ಮತ್ತು ಪೋಸ್ಟ್ ಮಾಡಲು ಸಿದ್ಧವಾಗುತ್ತದೆ.

ವೈರಲ್ ಆಗಿರುವ ಪ್ರಾಂಪ್ಟ್‌ಗಳಲ್ಲಿ ಒಂದನ್ನು ಕಾಪಿ-ಪೇಸ್ಟ್ ಮಾಡಿ.

ನಿಮ್ಮ ಮುಖ ಕಾಣಿಸುವ ಸ್ಪಷ್ಟವಾದ ಚಿತ್ರವನ್ನು ಅಪ್‌ಲೋಡ್ ಮಾಡಿ.

ಜೆಮಿನಿಯಲ್ಲಿ, AI ಎಡಿಟಿಂಗ್ ಮೋಡ್‌ಗೆ ಪ್ರವೇಶಿಸಲು 'ಇಮೇಜ್ ಎಡಿಟಿಂಗ್ ಪ್ರಯತ್ನಿಸಿ' (ಬನಾನಾ ಐಕಾನ್ ನೋಡಿ) ಕ್ಲಿಕ್ ಮಾಡಿ.

ಈ ಲುಕ್ ರಚಿಸಲು ಬಳಕೆದಾರರು ತಮ್ಮ Google ಖಾತೆಯೊಂದಿಗೆ ಜೆಮಿನಿ ಅಥವಾ ChatGPT ನಲ್ಲಿ ಲಾಗಿನ್ ಆಗಬೇಕು.