ನ್ಯೂಸ್

VIDEO| ಸಿನಿಮಾ ಕೆರಿಯರ್​ಗೆ ಬ್ರೇಕ್​ ಬಿದ್ದಿದ್ಯಾಕೆ ಎಂದರೆ ಮಾತು ಬೆಳೆಯುತ್ತಾ ಹೋಗುತ್ತೆ: ವಿನೋದ್ ರಾಜ್

ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​​ನಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದವರು ನಟ ವಿನೋದ್​ ರಾಜ್. ಇವರ ತಾಯಿ ಹಿರಿಯ ನಟಿ ಲೀಲಾವತಿ ಸದ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಗ ನಟ ವಿನೋದ್ ರಾಜ್​ ಕುಮಾರ್ ತಾಯಿ ಆರೈಕೆ ಮಾಡುತ್ತಿದ್ದಾರೆ. ಆದರೆ, ಬಹುಬೇಗನೆ ಅವರ ಕೆರಿಯರ್​ಗೆ ಬ್ರೇಕ್​ ಬಿದ್ದಿದ್ಯಾಕೆ ಎಂಬುದರ ಕುರಿತು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಕುರಿತು ವಿಜಯವಾಣಿ ಜೊತೆ ಮಾತನಾಡಿದ ವಿನೋದ್​ ರಾಜ್ ಅವರು, ನಾನು ಸಿನಿಮ ಮಾಡಿದ್ದೇನೆ ಮುಂದಕ್ಕೆ ಏನು ಮಾಡಬೇಕೆಂಬುದರ ಕುರಿತು ನಾನು ಹೆಚ್ಚಾಗಿ ಯೋಚನೆ ಮಾಡುತ್ತಿದ್ದೆ. ಈ ವಿಚಾರವಾಗಿ ಮಾತನಾಡಿದರೆ ಮಾತು ಬೆಳೆಯುತ್ತಾ ಹೋಗುತ್ತದೆ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ. ನೂರಾರು ಸಮಸ್ಯೆಗಳ ನಡುವೆ ಚಿತ್ರರಂಗ ಸಾಗಿದೆ ಎಂದರೆ ಮುಂದಿನ ಯುವ ಪೀಳಿಗೆಗೆ ಅದು ಹೆಚ್ಚು ಸಹಾಯವಾಗುತ್ತದೆ.

ಈ ವಿಚಾರವಾಗಿ ಯೋಚನೆ ಮಾಡುತ್ತಾ ಕುಳಿತರೆ ಸಮಯ ಉರುಳಿ ಹೋಗಿ ಬಿಡುತ್ತದೆ. ಸಮಯ ಇಲ್ಲದೇ ಇರೋದ್ರಿಂದ ಮುಂದಿನ ವಿಚಾರಗಳ ಬಗ್ಗೆ ಯೋಚನೆ ಮಾಡಬೇಕು. ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಆಸೆ ತುಂಬಾ ಇತ್ತು ಜನರು ನನ್ನನ್ನು ಅದೇ ರೀತಿ ಸ್ವೀಕಾರ ಮಾಡಿದ್ದರು. ಇವತ್ತಿಗೂ ಜನ ಅದೇ ಕ್ರೇಜ್​ ಹಾಗೂ ಅಭಿಮಾನ ಹೊಂದಿದ್ದು, ಇಡೀ ಕರ್ನಾಟಕದಲ್ಲಿ ಹಾಡಿಕೊಂಡು ಡ್ಯಾನ್ಸ್​ ಮಾಡಿರುವವರನ್ನು ನಾವು ಈವರೆಗೂ ನೋಡಿಲ್ಲ ಎಂದು ಹೇಳುತ್ತಾರೆ.

ನಾವು ಕನ್ನಡಿಗರು ಸ್ವಲ್ಪ ಹಿಂದೆ ಉಳಿದ ಹಾಗೆ ಕಾಣಿಸುತ್ತಿಲ್ಲವಾ. ಏಕೆಂದರೆ ಈಗಿರುವ ಸ್ಯಾಂಡಲ್​ವುಡ್​ ನಟರು ಹಾಗೂ ನಮ್ಮ ಕ್ರಿಕೆಟಿಗರಿಂದ ಕರ್ನಾಟಕವನ್ನು ಜನ ಗುರುತಿಸಿದ್ದಾರೆ. ಸದ್ಯಕ್ಕೆ ಯಾವ ಸಿನಿಮಾ ಮಾಡುವ ಪ್ಲ್ಯಾನ್​ ಇಲ್ಲ. ಏಕೆಂದರೆ ಯುವಕರು ಚೆನ್ನಾಗಿ ಸಿನಿಮಾ ಮಾಡಿದರೆ ಹೊಗಳುತ್ತೇನೆ ಆದರೆ, ನಾನು ಯಾರನ್ನೂ ತೆಗಳುವುದಿಲ್ಲ. ಅರ್ಥ ಮಾಡಿಕೊಳ್ಳಿ ನಾನು ಸತ್ಯವನ್ನು ಹೇಳಿದ್ದೇನೆ ಅಷ್ಟೇ ಎಂದು ನಟ ವಿನೋದ್​ ರಾಜ್​ ಹೇಳಿದ್ದಾರೆ.