ನ್ಯೂಸ್

ಕಪ್​ ಮಿಸ್​ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ.. ಮಹಿಳೆಯರನ್ನು ದುರ್ಬಲರು ಎನ್ನುವ ಮುಟ್ಟಾಳ ನಾನಲ್ಲ ಎಂದ್ರು ವಿನಯ್​

ಬೆಂಗಳೂರು: ಬಿಗ್​ಬಾಸ್​​ ಸ್ಪರ್ಧಿ ವಿನಯ್​ ಗೌಡಾ ನಾನು ಕೈಗೆ ಬಳೆ ಹಾಕಿಕೊಂಡಿಲ್ಲ ಎಂದು ಎದುರಾಳಿ ಸ್ಪರ್ಧಿಗೆ ಹೇಳಿದ್ದ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕುರಿತಾಗಿ ವಿನಯ್​ ನಂತ್ರ ಕ್ಷಮೆ ಕೂಡಾ ಕೇಳಿದ್ದರು. ಈ ವಿಚಾರವಾಗಿ ವಿನಯ್​ ಗೌಡಾ ಮತ್ತೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

ಖಾಸಗಿವಾಹಿನಿ ಸಂದರ್ಶನದಲ್ಲಿ ಮಾತನಾಡಿದ ವಿನಯ್​ ಗೌಡಾ, ‘ಮಹಿಳೆಯರ ಭಾವನೆಗೆ ನೋವು ತರಬೇಕು ಎಂಬ ಉದ್ದೇಶದಿಂದ ಬಳೆ ಎಂಬ ಪದವನ್ನು ನಾನು ಬಳಕೆ ಮಾಡಿಲ್ಲ. ಹೆಣ್ಣುಮಕ್ಕಳಿಗೆ ನನಗಿಂತ ಹೆಚ್ಚು ಗೌರವ ನೀಡುವ ವ್ಯಕ್ತಿ ಬೇರೆ ಯಾರೂ ಇಲ್ಲ. ಹೆಣ್ಣುಮಕ್ಕಳು ವೀಕ್​ ಅಂತ ತೋರಿಸೋಕೆ ಆಡಿದ ಮಾತು ಅದಲ್ಲ. ಜಗಳದ ನಡುವೆ ಆಡಿದ ಒಂದು ಪದವನ್ನು ಇಟ್ಟುಕೊಂಡು ನೀವು ಕ್ರಾಂತಿ ಮಾಡೋಕೆ ಆಗಲ್ಲ. ಬಳೆ ವಿಷಯ ಇಷ್ಟು ದೊಡ್ಡದಾಗಿದೆ ಎಂಬುದು ನನಗೆ ವೀಕೆಂಡ್​ನಲ್ಲಿಯೇ ಗೊತ್ತಾಗಿದ್ದು. ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆಂದು ಹೇಳಿದ್ದಾರೆ. 

ನನ್ನ ಹೆಂಡತಿ ನನಗೆ ಬೆನ್ನೆಲುಬಾಗಿ ನಿಂತಿದ್ದಾಳೆ. ಮಹಿಳೆಯರನ್ನು ದುರ್ಬಲರು ಅಂತ ಕರೆಯುವ ಮುಠಾಳ ನಾನಲ್ಲ. ಮಾತಿನ ಭರದಲ್ಲಿ ಬಂದ ಪದ ಅಷ್ಟು ಇಶ್ಯೂ ಆಯಿತು. ಕಪ್​ ಮಿಸ್​ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ ಎಂದುಕೊಳ್ಳುತ್ತೇನೆ. ಯಾಕೆಂದರೆ, ಆ ಸಮಯದಲ್ಲಿ ಆಗಿದ್ದೆಲ್ಲವೂ ಒಳ್ಳೆಯದಕ್ಕೆ. ಅದು ಆಗಿರಲಿಲ್ಲ ಎಂದರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ ಎಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ರಸ್ತೆಯಲ್ಲಿ ಓಡಾಡುವಾಗ ನೀವು ಸಾಕಷ್ಟು ಬೈಗುಳುಗಳನ್ನು ಕೇಳುತ್ತೀರಿ. ಅದೆಲ್ಲವೂ ಮಹಿಳೆಯವರ ವಿರುದ್ಧವಾಗಿದೆ ಎಂದು ಹೇಳಿದರೆ ಇವತ್ತು ಜನಸಂಖ್ಯೆಯ ಅರ್ಧದಷ್ಟು ಜನರು ಜೈಲಿನಲ್ಲಿ ಇರಬೇಕಾಗುತ್ತದೆ. ಜಗಳ ಆಡುವಾಗ ಗಂಡುಮಕ್ಕಳು ಮಾತ್ರವಲ್ಲದೇ ಹೆಣ್ಣುಮಕ್ಕಳು ಕೂಡ ಸಾಕಷ್ಟು ಮಾತನಾಡುತ್ತಾರೆ. ಅದು ಮಾತಿನ ಭರದಲ್ಲಿ ಬಂದ ಪದ ಎಂದು ವಿನಯ್​ ಗೌಡ ಹೇಳಿದ್ದಾರೆ.