ಸೋಮವಾರಪೇಟೆ ತಾಲೂಕಿನ ಕಿರಗಂದೂರು-ಡಿಬಿಡಿ ರಸ್ತೆ ಅಡ್ಡಲಾಗಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸೇತುವೆಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಚಂಗಪ್ಪ, ಲೋಕೇಶ್, ಸತೀಶ್ ಇದ್ದರು. 
ನ್ಯೂಸ್

ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಎಚ್ಚರ ವಹಿಸಿ

ಸೋಮವಾರಪೇಟೆ: ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಇತ್ತೀಚೆಗೆ ಚಾಲನೆ ನೀಡಿದರು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ರಸ್ತೆ ಕಾಮಗಾರಿ ಸಂದರ್ಭ ಕಳಪೆ ಕಾಮಗಾರಿ ನಡೆಯದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ಗುಣಮಟ್ಟದ ಕಾಮಗಾರಿ ನಡೆದರೆ ರಸ್ತೆಗಳು ಬಾಳಿಕೆ ಬರುತ್ತವೆ ಎಂದು ಹೇಳಿದರು.

ಇದೇ ಸಂದರ್ಭ 15 ಲಕ್ಷ ರೂ.ವೆಚ್ಚದ ಕಿರಗಂದೂರು-ಡಿಬಿಡಿ ರಸ್ತೆ ಸೇತುವೆ ಉದ್ಘಾಟನೆ, 25 ಲಕ್ಷ ರೂ. ವೆಚ್ಚದ ಕಿರಗಂದೂರು ದುರ್ಗಾ ಕಾಲನಿ ರಸ್ತೆ ಕಾಂಕ್ರೀಟೀಕರಣ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಕಿರಗಂದೂರು ಗ್ರಾಮದ ಸಂಪರ್ಕ ರಸ್ತೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದರು.

ಡಿಸಿಸಿ ಸದಸ್ಯ ಎಸ್.ಎಂ.ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಪ್ರಮುಖರಾದ ವಿ.ಎ.ಲಾರೆನ್ಸ್, ಎಸ್.ಬಿ. ಸುರೇಂದ್ರ, ಕೆ.ಪಿ.ರೋಷನ್, ಎಸ್.ಪಿ.ಗೋಪಾಲ್, ಸಬಿತಾ ಚೆನ್ನಕೇಶವ, ಎಸ್.ಎಂ.ಕೃಷ್ಣಕಾಂತ್ ಇದ್ದರು.