ನ್ಯೂಸ್

ಚಳಿ ಕಾಯಿಸಲು LPG ಗ್ಯಾಸ್​ಗೆ ಬೆಂಕಿ ಹಾಕಿದ ಭೂಪ!: ವಿಡಿಯೋ ಇಲ್ಲಿದೆ ನೋಡಿ..​

LPG:ಸಾಮಾನ್ಯವಾಗಿ ಚಳಿಗಾಲದಲ್ಲಿ ಎಲ್ಲರೂ ಒಲೆಯ ಬಳಿ ಅಥವಾ ಒಣಗಿದ ಎಲೆ, ಹುಲ್ಲಿಗೆ ಬೆಂಕಿ ಚಳಿ ಹಾಕಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಚಳಿಯನ್ನು ಹೋಗಲಾಡಿಸಲು ಮನೆಯಲ್ಲಿ ಅಡಿಗೆಗೆ ಉಪಯೋಗಿಸುವ ಎಲ್​ಪಿಜಿ ಗ್ಯಾಸ್​ಗೆ ಬೆಂಕಿ ಹಾಯಿಸಿ, ರಸ್ತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಾನೆ. ಇದೀಗ ಇದರ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಕೂತ್ತಿದ್ದಾನೆ. ತೀವ್ರ ಚಳಿ ಹಿನ್ನೆಲೆ, ಮನೆಯಲ್ಲಿನ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಹೊರ ತಂದು ಗ್ಯಾಸ್ ಮುಚ್ಚಳ ಓಪನ್​ ಮಾಡಿ ನೇರವಾಗಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡಿದ್ದಾನೆ. ಇತ ಒಬ್ಬನೆ ಅಲ್ಲದೆ ಬೆಂಕಿ ಕಾಯಿಸಿಕೊಳ್ಳಲು ಇತತರು ಬಂದು ಸೇರುತ್ತಾರೆ. ಅಲ್ಲಿ ಯಾರಿಗೂ ಸಿಲಿಂಡರ್​ ಸ್ಫೋಟಗೊಳ್ಳುತ್ತೆ ಎಂದ ಭಯ ಇಲ್ಲ. ಇದನ್ನು ಗಮನಿಸಿ ದಾರಿಹೋಕರು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಅಘಾತಕಾರಿ ವಿಷಯವವೆನಂದರೆ ಇವರಿದ್ದ ಪಕ್ಕದಲ್ಲಿಯೇ ಅನೇಕ ಪೆಟ್ರೋಲ್ ಖಾಲಿ​ ಬಾಟಲಿಗಳು ಬಿದ್ದಿವೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರೆ ಘಟನೆ ಬೇರೆ ರೀತಿಯಲ್ಲಿ ಇರುತ್ತಿತ್ತು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂತಹ ಕೆಲಸ ಮಾಡುವುದು ತುಂಬಾ ಅಪಾಯಕಾರಿ ಎಂದಿದ್ದರೆ, ಇನ್ನೂ ಕೆಲವರು ವ್ಯಕ್ತಿ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದಾರೆ.(ಏಜೆನ್ಸೀಸ್​) ​