ನ್ಯೂಸ್

ಪೋಕ್ಸೋ ಪ್ರಕರಣ ಆರೋಪಿಗೆ ಚಪ್ಪಲಿ ಮೆರವಣಿಗೆ! ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು

ಬೆಳಗಾವಿ: ಫೋಕ್ಸೋ ಪ್ರಕರಣ ಆರೋಪಿಗೆ ಗ್ರಾಮದಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಆರೋಪಿಯ ಮೇಲೆ ಹಲ್ಲೆ ಮಾಡಿದ ಸಂತ್ರಸ್ತ ಯುವತಿ, ಗ್ರಾಮದ ಮಹಿಳೆಯರೊಡನೆ ಸೇರಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಗ್ರಾಮದ ಅಪ್ರಾಪ್ತ ಯುವತಿಯ ಜತೆಗೆ ಪ್ರೀತಿ ಮಾಡಿದ್ದ ಆರೋಪಿ ಅನಿಲ್ ಮೂಕನವರ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆದರೆ, ಇದೀಗ ಜಾಮೀನಿನ ಮೇಲೆ ಹೊರಬಂದ ವಿಷಯ ಕೇಳಿ ಯುವತಿ ಛೀಮಾರಿ ಹಾಕಿ, ಚಪ್ಪಲಿಯಿಂದ ಥಳಿಸಿದ್ದಾಳೆ.

ಮೂರು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರ ಬಂದ ಆರೋಪಿ ಗ್ರಾಮಕ್ಕೆ ಬಂದ ಕೂಡಲೇ ಚಪ್ಪಲಿ ಹಾರ ಹಾಕಿದ ಮಹಿಳೆಯರು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.