ನ್ಯೂಸ್

ಪರಿಸರ ಸ್ನೇಹಿ ಬಿದಿರಿನ ವಾಶಿಂಗ್​ ಬೇಸಿನ್​ ಹೇಗಿದೆ ನೋಡಿ..!

ನಾಗಾಲ್ಯಾಂಡ್​​ ಸಚಿವ ತಮ್ಜೆನ್​​ ಇಮ್ನಾ ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಬಾರಿಯೂ ವೈವಿಧ್ಯಮಯ ವಿಡಿಯೋಗಳನ್ನ ಹಂಚಿಕೊಳುತ್ತಾರೆ. ಸದಾ ಒಂದಿಲ್ಲೊಂದು ವಿಶಿಷ್ಟ ವಿಡಿಯೋಗಳನ್ನ ಹಂಚಿಕೊಳ್ಳುವ ತಮ್ಜೆನ್​​ ಇದೀಗ ತಮ್ಮ ರಾಜ್ಯದ ಹಳ್ಳಿಗಳಲ್ಲಿ ಜನರು ಬಿದಿರನ್ನು ಬಳಸಿ ಪರಿಸರ ಸ್ನೇಹಿ ವಾಶ್​ ಬೇಸಿನ್​ ತಯಾರಿಸಿರುವ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.


ವಿಶೇಷ ಅಂದ್ರೆ ಪರಿಸರದಲ್ಲಿ ದೊರೆಯುವಂತಹ ವಸ್ತುಗಳನ್ನೇ ಬಳಸಿಕೊಂಡು ಅಲ್ಲಿನ ಜನರು ಈ ವಾಶಿಂಗ್​ ಬೇಸಿನ್​​ ತಯಾರಿಸಿದಕ್ಕೆ ಶ್ಲಾಘಿಸಿದ್ದಾರೆ.
''ಇದು ಬಿದಿರನ್ನು ಬಳಸಿ ತಯಾರಿಸಿರುವಂತ ವಾಶಿನ್​ ಬೇಸಿನ್​​, ಶೇ 100 ರಷ್ಟು ಇದು ನೈಸರ್ಗಿಕವಾಗಿದ್ದು, ಇದರಿಂದ ಯಾವುದೇ ರೀತಿಯ ತೊಂದರೆ ಇಲ್ಲ. ನಾಗಲ್ಯಾಂಡ್​​ ಜನರು ತಮ್ಮ ಹಳ್ಳಿಗಳಲ್ಲಿ ಪರಿಸರ ಸ್ನೇಹಿ ವಾಶಿಂಗ್​ ಬೇಸಿನ್​​ ತಯಾರಿಸಿ ಬಳಸುತ್ತಿದ್ದಾರೆ.

ಪರ್ವತ ಪ್ರದೇಶದಿಂದ ಹರಿದು ಬರುವ ನೀರನ್ನು ಬಿದಿರಿನ ಮೂಲಕ ಹಾಯಿಸಿ ಅದಕ್ಕೆ ರಮಧ್ರಗಳನ್ನ ಕೊರೆದು ತಮಗೆ ಅಗತ್ಯವಿದ್ದಾಗ ರಂಧ್ರಕ್ಕೆ ಸಿಕ್ಕಿಸಿದ ಮರದ ತುಂಡುಗಳನ್ನು ತೆಗೆದು ಕೈ, ಕಾಲುಗಳನ್ನು ತೊಳೆಯಬಹುದಾಗಿದೆ. ನಂತರ ಪುನ: ಮರದ ತುಂಡಿನಿಂದ ರಂಧ್ರವನ್ನು ಮುಚ್ಚುತ್ತಾರೆ. ಎಂಬುದಾಗಿ ತಮ್ಮ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.


ಸದ್ಯ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.