ನ್ಯೂಸ್

ಅಕ್ರಮ, ಕರ್ತವ್ಯಲೋಪ ಎಸಗಿದ ಆರೋಪದಡಿ ಇಬ್ಬರು ಪಿಡಿಒ ಅಮಾನತು

ರಾಣೆಬೆನ್ನೂರ: ಕರ್ತವ್ಯ ಲೋಪ, ಕಾಮಗಾರಿ ಮಾಡುವಲ್ಲಿ ನಿಯಮಾವಳಿ ಪಾಲಿಸಿದ ಹಾಗೂ ಖೊಟ್ಟಿ ದಾಖಲೆ ಸೃಷ್ಟಿಸಿ ಕಾಮಗಾರಿ ನಡೆಸಿದ ಆರೋಪದಡಿ ತಾಲೂಕಿನ ಕಲವೆತ್ತು ಗ್ರಾಪಂ ಪಿಡಿಒ ಶಾಂತಿನಾಥ ಜೈನ್​ ಮತ್ತು ಹಾವೇರಿ ತಾಲೂಕಿನ ಯಲಗಚ್ಛ ಗ್ರಾಪಂ ಪಿಡಿಒ ಮಾಬೂಸಾಬ ಹೊಟ್ಟೆಕ್ಕೀರಣ್ಣನವರ ಇಬ್ಬರನ್ನು ಅಮಾನತುಗೊಳಿಸಿ ಜಿಪಂ ಸಿಇಒ ರುಚಿ ಬಿಂದಾಲ್​ ಆದೇಶ ಹೊರಡಿಸಿದ್ದಾರೆ.

ಶಾಂತಿನಾಥ ಜೈನ್​ ಮೇಲಿನ ಆರೋಪವೇನು..?

ಶಾಂತಿನಾಥ ಜೈನ್​ ಕವಲೆತ್ತು ಗ್ರಾಪಂನಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿದ್ದು, ಖೊಟ್ಟಿ ಬಿಲ್​ಗಳನ್ನು ಸೃಷ್ಟಿ ಮಾಡಿ ಒಂದಕ್ಕೆ ಎರಡರಷ್ಟು ಹೆಚ್ಚು ದರ ನಿಗದಿಪಡಿಸಿ ಬಿಲ್​ ಪಾವತಿ ಮಾಡಿದ್ದಾನೆ. ಗ್ರಾಪಂನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೆ ಕರ್ತವ್ಯಲೋಪವೆಸಗಿದ್ದಾನೆ.

2024&-26ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಲಾದ ಕಾಮಗಾರಿಗಳಲ್ಲಿ 59,075 ರೂ. ತೆರಿಗೆ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದ್ದು, ಇದನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಭರಿಸದೆ ಆಥಿರ್ಕ ನಷ್ಟವನ್ನುಂಟು ಮಾಡಿದ್ದಾನೆ. ಬೀಚಿಂಗ್​ ಪೌಡರ್​ ಖರೀದಿ, ಬೀದಿ ದೀಪ ಖರೀದಿ, ಕಂಪ್ಯೂಟರ್​ ಖರೀದಿ ಮತ್ತು ಕುಡಿಯುವ ನೀರಿನ ಸಾಮಗ್ರಿಗಳನ್ನು ಖರೀದಿಸಿದ್ದು ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ದರಪಟ್ಟಿಗಳಿದ್ದರೂ ಪ್ರಕಟಣೆ, ತುಲನಾತ್ಮಕ ಪಟ್ಟಿ, ಸರಬರಾಜು ಆದೇಶ ಹಾಗೂ ಸಾಮಗ್ರಿಗಳನ್ನು ಸ್ವೀಕರಿಸಿದ ಕುರಿತು ದೃಢೀಕರಣ ಇರುವುದಿಲ್ಲ.

ಮಹದೇವಪ್ಪ ಪರಸಪ್ಪ ಹರಿಜನ ನಿವೃತ್ತ ಸ್ವೀಪರ್​ ಇವರ ಸೇವಾ ಪುಸ್ತಕ ಹಾಗೂ ವರ್ಗಾವಣೆ ಪ್ರಮಾಣ ಪತ್ರವನ್ನು ಪರಿಶೀಲಿಸಿದಾಗ ಈತ ನಿವೃತ್ತಿ ಹೊಂದಿದ್ದರೂ ಅದನ್ನು ಪರಿಗಣಿಸದೆ ಅವರಿಗೆ 2024 ಡಿಸೆಂಬರ್​ನಿಂದ 2025 ಆಗಸ್ಟ್​ವರೆಗೆ 1,50,652 ರೂ. ಸಂಬಳ ಪಾವತಿಸಿ ಸರ್ಕಾರಕ್ಕೆ ಆಥಿರ್ಕ ನಷ್ಟ ಮಾಡಿದ್ದಾರೆ.

ಹೊಲಿಗೆ ಯಂತ್ರ, ನೀರಿನ ಮೋಟರ್​ ಖರೀದಿಯಲ್ಲಿ ವಂಚನೆ ಮಾಡಿದ್ದಾರೆ. ಸಿಡಿ ನಿರ್ಮಾಣ, ಕಾಂಕ್ರಿಟ್​ ರಸ್ತೆ ನಿರ್ಮಾಣ ಸೇರಿ ಇತರ ಕಾಮಗಾರಿಗಳಲ್ಲಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಕುರಿತು ತನಿಖೆ ನಡೆಸುವ ಸಲುವಾಗಿ ಪಿಡಿಒ ಶಾಂತಿನಾಥ ಜೈನ್​ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಕಾಮಗಾರಿ ಮಾಡದ ಆರೋಪ...

ಹಾವೇರಿ ತಾಲೂಕಿನ ಯಲಗಚ್ಛ ಗ್ರಾಪಂ ಪಿಡಿಒ ಮಾಬೂಸಾಬ ಹೊಟ್ಟೆಕ್ಕೀರಣ್ಣನವರ ನರೇಗಾದಡಿ 4920 ಮಾನವ ದಿನಗಳನ್ನು ಸೃಜನೆಯ ಗುರಿ ನೀಡಿದ್ದು, ಈವರೆಗೂ ಕೇವಲ 240 ಮಾನವ ದಿನಗಳನ್ನು ಸೃಜಿಸಿ ಶೇ. 5ರಷ್ಟು ಪ್ರಗತಿ ಸಾಧಿಸಿದ್ದಾರೆ. ಇದರಿಂದ ಈ ಭಾಗದ ಕೂಲಿ ಕಾಮಿರ್ಕರಿಗೆ ಕೆಲಸ ನೀಡುವಲ್ಲಿ ವಿಲವಾಗಿದ್ದಾರೆ. ಅಲ್ಲದೆ 2025&26ನೇ ಸಾಲಿನ ವಾಷಿರ್ಕ ಕ್ರೀಯಾ ಯೋಜನೆಯಲ್ಲಿ 21 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಆದರೆ, ಯಾವುದೆ ಕಾಮಗಾರಿಗಳನ್ನು ಆರಂಭಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.