ಮಿರ್ಲೆ ಗ್ರಾಪಂ ಸದಸ್ಯರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
ನ್ಯೂಸ್

ಮಿರ್ಲೆ ಪಿಡಿಒ ಸಂದೀಪ್ ವಿರುದ್ಧ ಗ್ರಾಪಂ ಸದಸ್ಯರ ಆಕ್ರೋಶ

ಸಾಲಿಗ್ರಾಮ: ತಾಲೂಕಿನ ಮಿರ್ಲೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಸಾಮಾನ್ಯ ಸಭೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು.

ಪ್ರಾರಂಭದಲ್ಲಿ ಪಿಡಿಒ ಸಂದೀಪ್ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ಫೋನ್‌ಗಳನ್ನು ನಮ್ಮ ಬಳಿ ಕೊಡಿ ನಂತರ ಸಭೆ ಪ್ರಾರಂಭಿಸುತ್ತೇವೆ ಎಂದು ಸದಸ್ಯರಿಗೆ ತಿಳಿಸಿದರು. ಇದರಿಂದ ಕುಪಿತರಾದ ಗ್ರಾಮ ಪಂಚಾಯಿತಿ ಸದಸ್ಯರು ನಮ್ಮ ಫೋನ್ ಗಳನ್ನು ನಿಮಗೆ ಏಕೆ ಕೊಡಬೇಕು? ಇದು ಯಾವ ಸರ್ಕಾರದ ರೂಲ್ಸ್? ಮೇಲಧಿಕಾರಿಗಳ ಆದೇಶ ಕೊಡಿ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ನಡೆಯುವ ಚರ್ಚೆ ಮತ್ತು ಕೆಲವು ದಾಖಲೆಗಳು ಹೊರಗಡೆ ಪ್ರಚಾರವಾಗಬಾರದು. ಹಾಗಾಗಿ ನಿಮ್ಮ ಫೋನ್‌ಗಳನ್ನು ನನ್ನ ಹತ್ತಿರ ನೀಡಿ ಎಂದು ಉಪಾಧ್ಯಕ್ಷೆ ನೇತ್ರಾವತಿ ತಿಳಿಸಿದರು. ಮತ್ತೆ ಕೆರಳಿದ ಗ್ರಾಮ ಪಂಚಾಯಿತಿ ಸದಸ್ಯರು ಅವರ ವಿರುದ್ಧವೂ ಹರಿಹಾಯ್ದರು. ಏಕೆ ಪಿಡಿಒ ಅವರೇ ಮಾಡಿರುವ ಹಗರಣ ಬಯಲಿಗೆ ಬರುತ್ತದೆ ಎಂದು ಭಯನಾ? ಸಾಮಾನ್ಯ ಸಭೆಯೆಂದರೆ ಎಲ್ಲ ಚರ್ಚೆ ಆಗಬೇಕು. ಆಗಿರುವ ಅಭಿವೃದ್ಧಿ ಕೆಲಸ. ಆಗುತ್ತಿರುವ ಕೆಲಸಗಳು ಮತ್ತು ಖರ್ಚು ವೆಚ್ಚಗಳು ಮಂಡನೆ ಆಗಬೇಕು. ಇವುಗಳನ್ನ ಮಾಡಿ ಎಂದರೆ ಗುಪ್ತವಾಗಿ ಮಾಡುತ್ತೇನೆ ಎಂದು ಹೇಳುತ್ತಿರಲ್ಲ. ಯಾಕೆ ಏನು ಸಮಸ್ಯೆಯಾಗಿದೆ? ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳಿದರು.

ನಂತರ ಸಭೆ ಗೊಂದಲದ ಗೂಡಾಗಿ ಅರ್ಧಕ್ಕೆ ನಿಂತಿತು. ಸಾಮಾನ್ಯ ಸಭೆ ನಡೆದು ಮೂರು ತಿಂಗಳಾಗಿದೆ. ತುರ್ತು ಸಭೆಗಳನ್ನು ಕರೆದು ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಇ ಸ್ವತ್ತುಗಳು ಆಗುತ್ತಿಲ್ಲ ಎಂದು ಗ್ರಾಮಸ್ಥರು ಮತ್ತು ಮತದಾರರು ನಮ್ಮನ್ನ ಹಿಗ್ಗಾಮುಗ್ಗ ಬೈಯ್ಯುತ್ತ್ತಿದ್ದಾರೆ. ಅಧಿಕಾರಿಗಳು ಮಾಡುತ್ತಿರುವ ತಪ್ಪಿಗೆ ಸದಸ್ಯರು ಏಕೆ ಬೈಸಿಕೊಳ್ಳಬೇಕು ಎಂದು ಸದಸ್ಯರು ಹರಿಹಾಯ್ದರು.

ಹೊರ ನಡೆದ ಪಿಡಿಒ: ಕಟ್ಟಡದ ಮೇಲೆ ಅಂತಸ್ತಿನಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗದೆ ಪಿಡಿಒ ನೆಲಮಾಳಿಗೆಗೆ ಬಂದು ತಮ್ಮ ರೂಮಿನಲ್ಲಿ ಕುಳಿತುಕೊಂಡರು. ಸಭೆ ಈಗ ಮಾಡಲ್ಲ 4 ಗಂಟೆಗೆ ಮಾಡುತ್ತೇನೆ ಎಂದು ಉತ್ತರ ನೀಡಿದರು. ಮತ್ತೆ ಸದಸ್ಯರು ಕೆಂಡಾಮಂಡಲರಾದರು. ನಿಮಗೆ ಇಷ್ಟ ಬಂದಂತೆ ಸಭೆ ನಡೆಸಲು ನಮಗೆ ಕೆಲಸ ಇಲ್ಲವೇ? ಸಭೆ ಈಗ ಆಗಬೇಕು. ಇಲ್ಲ

ದಿದ್ದರೆ ನಿಮ್ಮನ್ನ ಹೊರಗಡೆ ಬಿಡುವುದಿಲ್ಲ ಎಂದು ಪಂಚಾಯಿತಿ ಒಳಗೆ ಪಿಡಿಒ ಕುರಿಸಿಕೊಂಡು ಅವರು ಅಲ್ಲೇ ಕುಳಿತುಕೊಂಡರು. ಒಟ್ಟಾರೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ನಡುವೆ ಹೈಡ್ರಾಮ ನಡೆಯಿತು.