ಮುಂಬೈ: ಎಂಟು ಪೊಲೀಸರ ಹತ್ಯೆಗೆ ಕಾರಣನಾಗಿದ್ದ ವಿಕಾಸ್ ದುಬೆಯನ್ನೂ ನಿನ್ನೆ ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ನಲ್ಲಿ ಕೊಂದಿದ್ದಾರೆ. ದುಬೆಯ ಅಂತ್ಯಕ್ರಿಯೆಯೂ ಆಗಿದೆ.
ಅದರ ಬೆನ್ನಲ್ಲೇ ಇಂದು ವಿಕಾಸ್ ದುಬೆಯ ಇನ್ನೋರ್ವ ಸಹಚರನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದುಬೆ ಸಹಚರ ಅರವಿಂದ್ ಅಕಾ ಗುಡ್ಡನ್ ತ್ರಿವೇದಿ ಹಾಗೂ ಅವನ ಚಾಲಕ ಸೋನು ತಿವಾರಿ ಇಬ್ಬರೂ ಥಾಣೆಯ ಸುತ್ತಲಿನ ಪ್ರದೇಶದಲ್ಲಿಯೇ ಅಡಗಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಜುಹು ಭಯೋತ್ಪಾದನಾ ನಿಗ್ರಹ ದಳ, ಅವರ ಪತ್ತೆ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: ‘ನಾನು ಕೊವಿಡ್-19 ತಪಾಸಣೆ ಮಾಡಿಸಿಕೊಂಡೆ…ನೀವೂ ತಪ್ಪದೆ ಟೆಸ್ಟ್ಗೆ ಒಳಗಾಗಿ!’
ಗುಡ್ಡನ್ ದುಬೆಯೊಂದಿಗೆ ಸೇರಿ ಹಲವು ಕ್ರೈಂಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. 2001ರಲ್ಲಿ ನಡೆದ ಉತ್ತರ ಪ್ರದೇಶ ಸಚಿವ ಸಂತೋಷ್ ಶುಕ್ಲಾ ಅವರ ಹತ್ಯೆಯಲ್ಲೂ ಈತನ ಕೈವಾಡ ಇತ್ತು ಎಂದು ವರದಿಯಾಗಿದೆ.
ಗುಡ್ಡನ್ನನ್ನು ಬಂಧಿಸಿದ ಎಟಿಎಸ್ಗೆ ಉತ್ತರ ಪ್ರದೇಶ ಸರ್ಕಾರ ಬಹುಮಾನವನ್ನೂ ಘೋಷಿಸಿದೆ. (ಏಜೆನ್ಸೀಸ್)