ಬೆಂಗಳೂರು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 2 ದಿನಗಳ ‘ಎಜುಕೇಷನ್ ಎಕ್ಸ್‌ಪೋ’ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
ಹೆಸರಾಂತ ಚಿತ್ರನಟರಾದ ದಿಗಂತ್, ನಟಿ ಮೇಘನಾ ಗಾಂವ್ಕರ್ ಮತ್ತು ದಿ ಜಡ್ಜ್‌ಮೆಂಟ್ ಚಿತ್ರ ನಿರ್ದೇಶಕ ಗುರುರಾಜ್ ಕುಲಕರ್ಣಿ ಹಾಗೂ ವಿಜಯಾನಂದ ಟ್ರಾವೆಲ್ಸ್ ವ್ಯವಸ್ಥಾಪಕ ಶಿವ ಸಂಕೇಶ್ವರ ಎಕ್ಸ್‌ಪೋಗೆ ಶನಿವಾರ ಚಾಲನೆ ನೀಡಿದರು.
ತಮ್ಮಷ್ಟಿದ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಕಾತುರಾಗಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಬೇಕೆಂಬ ಮಹದಾಸೆ ಹೊಂದಿರುವ ಪಾಲಕರು ಎಕ್ಸ್‌ಪೋಗೆ ಭೇಟಿ ನೀಡಿ ನೀಡಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಯಾವೆಲ್ಲ ಕೋರ್ಸ್‌ಗಳು ಟ್ರೆಂಡಿಂಗ್‌ನಲ್ಲಿವೆ, ಅವುಗಳ ವ್ಯಾಸಂಗಕ್ಕೆ ತಗಲುವ ಶುಲ್ಕ, ಪ್ಲೇಸ್‌ಮೆಂಟ್ ಸೇರಿ ಹಲವು ವಿಷಯಗಳನ್ನು ಮತ್ತು ತಮ್ಮಲ್ಲಿದ್ದ ಗೊಂದಲಗಳನ್ನು ಬಗೆಹರಿಸಿಕೊಂಡರು.
ಗೀತಂ, ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಬಿಜಿನೆಸ್ ಸ್ಟಡೀಸ್, ಜ್ಯೋತಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ, ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜು, ಪ್ರಾರ್ಥನಾ ಡಾಟ್ ಇನ್ ಸ್ಕೂಲ್, ಕೆಎಸ್‌ಐಟಿ, ಸಿಎಂಆರ್, ನಾಣಾಕ್ಯ ವಿಶ್ವವಿದ್ಯಾಲಯ, ಎಸ್‌ಜೆಬಿಐಟಿ, ಸುರಾನಾ ಕಾಲೇಜು, ಸಿಟಿ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ಹಲವು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಭಾಗವಹಿಸಿವೆ.
ಕಾರ್ಯಕ್ರಮದಲ್ಲಿ ವಿಆರ್‌ಎಲ್ ಮೀಡಿಯಾ ಪ್ರೈ ಲಿ. ಜಾಹೀರಾತು ವಿಭಾಗದ ಉಪಾಧ್ಯಕ್ಷ ಅರುಣ್ ಕರಡಿ, ವಿಜಯವಾಣಿ ಸಂಪಾದಕ ಕೆ.ಎನ್. ಚೆನ್ನೇಗೌಡ ಉಪಸ್ಥಿತರಿದ್ದರು.
ಇಂದು ಕೊನೇ ದಿನ
ಎರಡು ದಿನಗಳ ಎಕ್ಸ್‌ಪೋಗೆ ಭಾನುವಾರ (ಮೇ 19) ತೆರೆಬೀಳಲಿದೆ. ಶನಿವಾರದಂತೆ ಭಾನುವಾರ ಕೂಡ ವಿಶೇಷ ಉಪನ್ಯಾಸ ನಡೆಯಲಿದೆ. ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಮಣ್ಯ ಅವರು ಇಂಜಿನಿಯರಿಂಗ್ ಕೋರ್ಸ್‌ನ ಟ್ರೆಂಡ್‌ಗಳನ್ನು ತಿಳಿಸಿಕೊಡಲಿದ್ದಾರೆ. ಕೇವಲ ಕಂಪ್ಯೂಟರ್ ಸೈನ್ಸ್ ಮಾತ್ರವಲ್ಲ, ಸಿವಿಲ್, ಮೆಕ್ಯಾನಿಕಲ್‌ನಲ್ಲಿಯೂ ಯಾವ ರೀತಿಯ ವ್ಯಾಸಂಗ ಮಾಡಿದರೆ, ಪ್ಲೇಸ್‌ಮೆಂಟ್ ದೊರೆಯಲಿದೆ ಎಂಬ ವಿಶೇಷ ಉಪನ್ಯಾಸ ನೀಡಲಿದ್ದಾರೆ.