ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಖಾಸಗಿ ಕೆಲಸ ಕಾರ್ಯಗಳಲ್ಲಿ ವಿಘ್ನ

ಮೇಷ: ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ನಿಮ್ಮ ವರ್ತನೆ ಇರಲಿ. ಮಗಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಶುಭಸಂಖ್ಯೆ: 8

ವೃಷಭ: ಕುಟುಂಬದವರೊಂದಿಗೆ ಸಂತೋಷಕೂಟ. ಆತ್ಮೀಯರ ಸಲಹೆ ತಿರಸ್ಕರಿಸಬೇಡಿ. ಮೇಲಧಿಕಾರಿಗಳಿಂದ ಬೈಗುಳ. ಶುಭಸಂಖ್ಯೆ:3

ಮಿಥುನ: ಅಷ್ಟಮದ ಶನಿ ಹಳೆಯ ವ್ಯಾಧಿ ಮರುಕಳಿಸಲು ಕಾರಣವಾಗಬಹುದು. ಲಕ್ಷ್ಮೀನರಸಿಂಹನನ್ನು ಆರಾಧಿಸಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ಕಟಕ: ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ. ಅನಗತ್ಯ ವಾಗ್ವಾದಗಳಿಗೆ ಅವಕಾಶ ಬೇಡ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 4

ಸಿಂಹ: ಒತ್ತಡಗಳನ್ನು ಜಾಗ್ರತೆಯಿಂದ ನಿಭಾಯಿಸಿ. ಆರೋಗ್ಯ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 5

ಕನ್ಯಾ: ರಾಜಕಾರಣಿಗಳಿಗೆ ವಿಶೇಷ ಮನ್ನಣೆ. ಕಲಾವಿದರು ಅವಕಾಶವನ್ನು ತಿರಸ್ಕರಿಸಬೇಡಿ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 2

ತುಲಾ: ಗೃಹ ನಿರ್ವಣಕ್ಕೆ ಚಾಲನೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅನಗತ್ಯ ಗೊಂದಲ. ತಂದೆ ತಾಯಿಯ ಮಾತನ್ನು ಪಾಲಿಸಿ. ಶುಭಸಂಖ್ಯೆ:1

ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ವಾಗ್ವಾದ. ಹಳೆಯ ಸ್ನೇಹಿತನ ಭೇಟಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4

ಧನಸ್ಸು: ನಿಮ್ಮ ಬಲಹೀನತೆ ಮುಳುವಾಗಬಹುದು. ಯೋಚಿಸಿ ಮಾತನಾಡಿ. ಮಕ್ಕಳಿಂದ ಶುಭ ಸುದ್ದಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 8

ಮಕರ: ಖಾಸಗಿ ಕೆಲಸ ಕಾರ್ಯಗಳಲ್ಲಿ ವಿಘ್ನ. ಮನೆಯವರೊಂದಿಗೆ ರ್ಚಚಿಸಿ ತೀರ್ವನ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7

ಕುಂಭ: ವ್ಯಾಪಾರಸ್ಥರಿಗೆ ಧನ ನಷ್ಟ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು. ನಿರೀಕ್ಷಿಸಿದ ಧನಲಾಭ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 6

ಮೀನ: ಸಾರ್ವಜನಿಕ ಜೀವನದಲ್ಲಿ ಅವಮಾನ. ಅನಿರೀಕ್ಷಿತ ಅತಿಥಿ ಆಗಮನ. ಧರ್ಮಕಾರ್ಯ ದಲ್ಲಿ ಆಸಕ್ತಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 3

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ