ನ್ಯೂಸ್

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಾಪತ್ರಯಗಳು ದೂರವಾಗಿ ನೆಮ್ಮದಿ

ಮೇಷ: ತಾಪತ್ರಯಗಳು ದೂರವಾಗಿ ನೆಮ್ಮದಿ. ಗೆಳೆಯರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಸಂಜೆ ವೇಳೆ ಆಯಾಸ. ಶುಭಸಂಖ್ಯೆ: 2

ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ: 2

ಮಿಥುನ: ನಿಮ್ಮ ಬಹುದಿನದ ಬಯಕೆಯನ್ನು ಕುಟುಂಬದೊಂದಿಗೆ ಸಮಾಲೋಚಿಸಿ. ವ್ಯಾಪಾರ ಆರಂಭಕ್ಕೆ ನಿರ್ಧರಿಸಿ. ಶುಭಸಂಖ್ಯೆ: 4

ಕಟಕ: ನಕಾರಾತ್ಮಕ ಯೋಚನೆಯಿಂದ ದೂರವಿರಿ. ಹಳೆಯ ಯೋಜನೆಯನ್ನು ಕಾರ್ಯಗತಗೊಳಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 3

ಸಿಂಹ: ನಿಮ್ಮ ಪ್ರತಿಭೆಗೆ ವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗಬಹುದು. ಯೋಚಿಸಿ ಮುಂದುವರಿಯಿರಿ. ಶುಭಸಂಖ್ಯೆ: 4

ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ, ಯಶಸ್ಸು ಸಿಗುತ್ತದೆ. ಪ್ರಭಾವಿಗಳ ಸಂಪರ್ಕ. ಇತಿ-ಮಿತಿಗಳನ್ನು ಅರಿತುಕೊಳ್ಳಿ. ಶುಭಸಂಖ್ಯೆ: 5

ತುಲಾ: ಉದ್ದಿಮೆಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ. ಶುಭಸಂಖ್ಯೆ: 7

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹ ಸಾಧನೆ ನಿಮ್ಮದಾಗಲಿದೆ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 3

ಧನಸ್ಸು: ನಿಮ್ಮ ಕುಟುಂಬದವರಿಗೆ ಭರವಸೆ ಮೂಡಿಸಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಮಕರ: ಕೈಬಿಟ್ಟ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಆರ್ಥಿಕ ವಿಚಾರದಲ್ಲಿ ಅಡಚಣೆ. ಶುಭಸಂಖ್ಯೆ: 4

ಕುಂಭ: ವಿದ್ಯಾಭ್ಯಾಸಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಹೃದಯ ಸಂಬಂಧಿ ತೊಂದರೆ ಬಂದೀತು. ಶುಭಸಂಖ್ಯೆ: 6

ಮೀನ: ಯಾವುದೇ ವಿಷಯವನ್ನು ಅನೇಕ ಬಾರಿ ಯೋಚಿಸಿ ಚಿಂತಿಸಿ ತೀರ್ವನಿಸಿ. ಹೊಸ ವ್ಯಾಪಾರ ಆರಂಭಕ್ಕೆ ಶುಭದಿನ. ಶುಭಸಂಖ್ಯೆ: 9

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ