ನ್ಯೂಸ್

ದಿನ ಭವಿಷ್ಯ; ಈ ರಾಶಿಯವರಿಗೆ ಇಂದು‌ ಮೇಲಧಿಕಾರಿಗಳಿಂದ ಕಿರಿಕಿರಿ

ಮೇಷ

ಮೇಲಾಧಿಕಾರಿಗಳಿಂದ ಕಿರಿಕಿರಿ. ವ್ಯಾಪಾರಸ್ಥರಿಗೆ ನಷ್ಟ. ಸಹೋದ್ಯೋಗಿಗಳ ಜತೆ ವಾಗ್ವಾದ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 8

ವೃಷಭ

ಹೊಸ ವ್ಯಾಪಾರಕ್ಕೆ ಚಾಲನೆ. ಭೂಮಿ ಖರೀದಿಗೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಕಿರಿಕಿರಿ. ಸಮಾಲೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 2

ಮಿಥುನ

ನವಮದ ಗುರು ಕಾರ್ಯ ನಾಶಕ್ಕೆ ಕಾರಣ. ಕೆಲಸ ಕಳೆದುಕೊಳ್ಳುವ ಭೀತಿ. ಸಮಸ್ಯೆ ಕಾಡಬಹುದು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 9

ಕಟಕ

ನಂಬಿದವರೇ ಕೈಕೊಡುವರು. ದುರ್ಗೆಯನ್ನು ಆರಾಧಿಸಿ. ಅನಾರೋಗ್ಯ ಹೆಚ್ಚಾಗಬಹುದು. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 6

ಸಿಂಹ

ಹಿತಶತ್ರುಗಳ ಕಾಟ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ. ವ್ಯಾಪಾರದಲ್ಲಿ ಅಧಿಕ ನಷ್ಟ. ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 4

ಕನ್ಯಾ

ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಮಗನ ವಿಚಾರದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 1

ತುಲಾ

ಮನೆಯಲ್ಲಿ ಸಡಗರದ ವಾತಾವರಣ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಶುಭಸಂಖ್ಯೆ: 3

ವೃಶ್ಚಿಕ

ಸಹೋದರರಿಂದ ಸಹಾಯ. ಮಗಳ ಮದುವೆಗೆ ಚಾಲನೆ. ಮೇಲಧಿಕಾರಿ ಒಪ್ಪಿಸಿದ ಕೆಲಸದ ನಿರ್ವಹಣೆ. ಸಂಜೆ ಆಯಾಸ. ಶುಭಸಂಖ್ಯೆ: 2

ಧನಸ್ಸು

ಮಾತು ಮುತ್ತಿನಂತಿರಲಿ. ಯೋಚಿಸಿ ಮಾತನಾಡಿ. ಯಾರ ಸಹಾಯ ಬೇಡ. ಹಣ ಉಳಿಕೆ ಅವಕಾಶ. ಸೈಟ್ ಖರೀದಿ ನಿರ್ಧಾರ. ಶುಭಸಂಖ್ಯೆ: 6

ಮಕರ

ನಿಮ್ಮ ಕಾರ್ಯ ನೈಪುಣ್ಯಕ್ಕೆ ಪುರಸ್ಕಾರ. ಕೃಷಿಕರಿಗೆ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ನೇಹಿತನ ಸಲಹೆ. ಶುಭಸಂಖ್ಯೆ: 7

ಕುಂಭ

ಧನ ನಷ್ಟ. ವ್ಯಾಪಾರದಲ್ಲಿ ಮೋಸ ಹೋಗುವಿರಿ. ನಂಬಿದವರೇ ಹಿಂದಿನಿಂದ ವಂಚಿಸುವರು. ಸಹೋದರಿಯ ಮನೆಗೆ ಭೇಟಿ. ಶುಭಸಂಖ್ಯೆ: 5

ಮೀನ

ಕೆಲಸಗಾರರಿಂದ ಪ್ರತಿರೋಧ. ಮನಸ್ಸಿಗೆ ಅವ್ಯಕ್ತ ಭಯ. ಪರಮೇಶ್ವರನನ್ನು ಸ್ತುತಿಸಿ. ಸಂಜೆಯ ವೇಳೆಗೆ ಸಮಾಧಾನ. ಶುಭಸಂಖ್ಯೆ: 7