ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸ್ವಂತ ಗ್ರಾಮದಿಂದ ಅತಿಥಿಗಳ ಆಗಮನ

ಮೇಷ: ನಿಮ್ಮ ಕಷ್ಟಕ್ಕೆ ತಕ್ಕುದಾದ ಪ್ರತಿಫಲ ಸಿಗಲಿದೆ. ಮೇಲಧಿಕಾರಿಗಳ ವಿಶ್ವಾಸ ಪಡೆಯಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9

ವೃಷಭ: ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಸಾಲಗಾರರಿಂದ ಕಿರಿಕಿರಿ. ಅಧಿಕಾರ ಚಲಾಯಿಸುವಲ್ಲಿ ಪ್ರತಿರೋಧ. ಶುಭಸಂಖ್ಯೆ: 1

ಮಿಥುನ: ಕಲಾವಿದರಿಗೆ ನಿರಾಸೆಯಾದೀತು. ಸಗಟು ವ್ಯಾಪಾರಸ್ಥರಿಗೆ ಅಧಿಕ ಲಾಭ. ಆರ್ಥಿಕ ಮುಗ್ಗಟ್ಟು ಕಾಡಬಹುದು. ಶುಭಸಂಖ್ಯೆ: 6

ಕಟಕ: ಸ್ತ್ರೀಯರಿಂದ ಲಾಭ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸೂಕ್ತ ಫಲ. ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 8

ಸಿಂಹ: ಅಪರಿಚಿತರಿಂದ ಸಹಾಯ. ಮಕ್ಕಳ ವಿಷಯದಲ್ಲಿ ಚಿಂತೆ. ಸ್ವಂತ ಗ್ರಾಮದಿಂದ ಅತಿಥಿಗಳ ಆಗಮನ. ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ: 1

ಕನ್ಯಾ: ಚಿಕ್ಕ ವ್ಯಾಪಾರಿಗಳು ನಷ್ಟ ಅನುಭವಿಸುವ ಸಾಧ್ಯತೆ. ಗಾಯಕರಿಗೆ, ನಟರಿಗೆ ಅವಕಾಶ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸೂಕ್ತ ಫಲ. ಶುಭಸಂಖ್ಯೆ: 9

ತುಲಾ: ಸಾರ್ವಜನಿಕ ಜೀವನದಲ್ಲಿ ಅವಮಾನ. ಬಂಧುಗಳೊಂದಿಗೆ ವಿರೋಧ. ಅನವಶ್ಯಕ ಖರ್ಚು. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ:1

ವೃಶ್ಚಿಕ: ಗೃಹನಿರ್ವಣದಲ್ಲಿ ಅಡೆತಡೆ. ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಲಾಭ. ಫಲ ಸಿಗುವ ಸಮಯದಲ್ಲಿ ನಿರಾಸೆ. ಶುಭಸಂಖ್ಯೆ: 3

ಧನಸ್ಸು: ವಿಳಂಬವಾದ ಕಾರ್ಯಕ್ಕೆ ಪುನರ್ ಚಾಲನೆ. ರಾಜಕೀಯ ರಂಗದಲ್ಲಿ ಇರುವವರಿಗೆ ವಿಫಲತೆ. ಉದ್ಯೋಗ ಕ್ಷೇತ್ರದಲ್ಲಿ ತೊಂದರೆ. ಶುಭಸಂಖ್ಯೆ: 1

ಮಕರ: ಋಣಾತ್ಮಕ ಚಿಂತನೆಯನ್ನು ಬಿಟ್ಟುಬಿಡಿ. ತಂದೆಯ ಅನಾರೋಗ್ಯ ಕಾಡಲಿದೆ. ನಿಮ್ಮ ಕಾರ್ಯವೈಖರಿಗೆ ಪ್ರಶಂಸೆ. ಶುಭಸಂಖ್ಯೆ: 9

ಕುಂಭ: ಬಟ್ಟೆ ವ್ಯಾಪಾರಿಗಳಿಗೆ ಲಾಭ. ಸಂಗಾತಿಯೊಂದಿಗೆ ವಿರಸ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಲಿದೆ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 6

ಮೀನ: ದೊಡ್ಡ ಮೊತ್ತದ ಖರ್ಚು ಎದುರಾಗಬಹುದು. ದೂರ ಪ್ರಯಾಣ ಸಾಧ್ಯತೆ. ಕೃಷಿಕರಿಗೆ ಅಧಿಕ ಲಾಭ. ಸರ್ಕಾರಿ ಕೆಲಸಗಳಲ್ಲಿ ಸಫಲತೆ. ಶುಭಸಂಖ್ಯೆ: 1