ನ್ಯೂಸ್

ಇಂದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ

ಮೇಷ: ಮನಸ್ಸಿಗೆ ಆಹ್ಲಾದ ಎನಿಸುವ ಘಟನೆಗಳು ಸಂಭವಿಸುತ್ತವೆ. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ವೃಷಭ: ಬಡವರಿಗೆ ಸಹಾಯ ಮಾಡಿ. ಗುರುಗಳ ಸನ್ನಿಧಿಗೆ ಭೇಟಿ. ಮದುವೆ ಯತ್ನದಲ್ಲಿರುವವರಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ: 7

ಮಿಥುನ: ಬಂಧುಗಳೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 2

ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಘಟನೆ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಹತ್ತಿರದ ಬಂಧುಗಳ ಆಗಮನ. ಶುಭಸಂಖ್ಯೆ: 8

ಸಿಂಹ: ದೊಡ್ಡಮೊತ್ತದ ಧನ ನಷ್ಟ. ಗೃಹ ನಿರ್ವಣಕ್ಕೆ ಕುಟುಂಬದೊಂದಿಗೆ ಮಾತುಕತೆ. ಆತ್ಮೀಯ ಸ್ನೇಹಿತನ ಆಗಮನ. ಶುಭಸಂಖ್ಯೆ: 4

ಕನ್ಯಾ: ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 4

ತುಲಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಸಂಗಾತಿಯ ಸಲಹೆಯನ್ನು ಪರಿಗಣಿಸಿ. ಸಹೋದರರೊಂದಿಗೆ ವಾಗ್ವಾದ. ಶುಭಸಂಖ್ಯೆ: 7

ವೃಶ್ಚಿಕ: ಭೂ ವಿವಾದಕ್ಕೆ ಸಂಬಂಧಿಸಿ ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕೃಷಿಕರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಅವಕಾಶ . ಶುಭಸಂಖ್ಯೆ: 5

ಧನಸ್ಸು: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಅಧಿಕ ನಷ್ಟ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6

ಮಕರ: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು ಎಚ್ಚರ. ಸಾರ್ವಜನಿಕವಾಗಿ ವಿಶೇಷ ಮನ್ನಣೆ. ಬಂಧುಗಳ ಮನೆಗೆ ಭೇಟಿ. ಶುಭಸಂಖ್ಯೆ: 4

ಕುಂಭ: ಕೂಡಿಟ್ಟ ಹಣದ ಅಪವ್ಯಯ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5

ಮೀನ: ನಿರೀಕ್ಷೆಯಲ್ಲಿದ್ದ ಕೆಲಸದ ಪ್ರಗತಿ.ಸ್ವಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ